ದಾವಣಗೆರೆ: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ- 2023ರಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ದಾವಣಗೆರೆ ಮಹಾನಗರ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ, ರಾಷ್ಟ್ರಮಟ್ಟದಲ್ಲಿ 169ನೇ ಸ್ಥಾನಗಳಿಸಿ ಸಾಧನೆ ಮಾಡಿದೆ ಎಂದು ಪಾಲಿಕೆ ಮೇಯರ್ ಬಿ,ಎಚ್.ವಿನಾಯಕ ಪೈಲ್ವಾನ್, ಆಯುಕ್ತ ರೇಣುಕಾ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಬಾರಿ 12ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 6 ಸ್ಥಾನಕ್ಕೇರಿದೆ. ಇದೊಂದು ಹೆಮ್ಮೆಯ ಸಂಗತಿ. ರಾಷ್ಟ್ರಮಟ್ಟದಲ್ಲಿ ಕಳೆದ ವರ್ಷ
220ನೇ ಬ್ಯಾಂಕ್ ಪಡೆದಿದ್ದು, ಈ ಬಾರಿ 169ನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಅಗ್ರಸ್ಥಾನ ಪಡೆಯಲು ನಗರದ ಮಹಾ ಜನತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಾನಗರದಲ್ಲಿ ಪ್ರತಿನಿತ್ಯ 170 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಕಸ ಸಂಗ್ರಹಿಸುವ ಮಹಾನಗರದ ಉತ್ತಮ ಬ್ಯಾಂಕ್ ಪಡೆಯಲು 92ಆಟೋ ಪಾಲಿಕೆಯಲ್ಲಿವೆ. ನಗರದ ಸಾಧ್ಯವಾಗಿದೆ. ಇದೇ ಮೊದಲ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ 150 ಆಟೋಗಳ ಅವಶ್ಯಕತೆ ಇದೆ.ಮುಂದಿನ ದಿನಗಳಲ್ಲಿ ಕಸ ಸಂಗ್ರಹಿಸಲು ಆಟೋಗಳನ್ನು ಹಂತ ಹಂತವಾಗಿ
ಖರೀದಿಸಲಾಗುವುದು.ಸ್ವಚ್ಛತೆ ಕಾಪಾಡಲು ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ನಿಮ್ಮ ಮನೆ ಸ್ವಚ್ಛವಾಗಿಡುವಂತೆ ನಿಮ್ಮ ಏರಿಯಾವನ್ನೂ ಸ್ವಚ್ಛವಾಗಿಡಬೇಕು ಎಂದು ಕರೆ ನೀಡಿದರು.
ಖಾಲಿ ನಿವೇಶನ ಸ್ವಚ್ಛವಾಗಿಡದ ಮಾಲೀಕರಿಗೆ ದಂಡ: ಮಹಾನಗರದಲ್ಲಿ 1.61 ಲಕ್ಷ ಆಸ್ತಿ ಇದ್ದು, ಇದರಲ್ಲಿ 1.43 ಲಕ್ಷ ಆಸ್ತಿ ಆನ್ ಲೈನ್ ಆಗಿವೆ. ನಮೂನೆ 2 (ಫಾರಂ-2)ನ್ನು ಆನ್ ಲೈನ್ ನಲ್ಲೇ ಆಸ್ತಿ ಮಾಲೀಕರು ಪಡೆಯಬಹುದು ಎಂದು ಪಾಲಿಕೆ ಆಯುಕ್ತ ರೇಣುಕಾ ತಿಳಿಸಿದರು. ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಲು ಪಾಲಿಕೆಯಿಂದ ನಿರಂತರವಾಗಿ ಆಸ್ತಿ ಮಾಲೀಕರಿಗೆ
ತಿಳಿಸುತ್ತಲೇ ಬರಲಾಗಿದೆ.
ಮಹಾ ನಗರದಲ್ಲಿಸುಮಾರು 45 ಸಾವಿರ ಖಾಲಿ ನಿವೇಶನ ಇದ್ದು, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಬೇಕಾದ ಮಾಲೀಕರ ಜವಾಬ್ದಾರಿ. ಇನ್ಮುಂದೆ ವರ್ಷಕ್ಕೊಮ್ಮೆ ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕಡ್ಡಾಯ ಅವುಗಳಮಾಲೀಕರೇ ಮಾಡಿಸಬೇಕು.ಸ್ವಚ್ಛತೆ ಕಾಪಾಡದ ನಿವೇಶನಗಳ ಮಾಲೀಕರಿಗೆ
ಪಾಲಿಕೆಯಿ೦ದ ದಂಡ ವಿಧಿಸಲಾಗುವುದು ಎಂದು ಆಯುಕ್ತ ರೇಣುಕಾ ಎಚ್ಚರಿಸಿದರು.