ದಾವಣಗೆರೆ; ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಬಳಿಯ ಕಂಸಾಗರದಲ್ಲಿ ಹೆಜ್ಜೇನು ಕಚ್ಚಿ ಯುವಕ ಸಾವನ್ನಪ್ಪಿದ್ದಾನೆ. ಕಂಸಾಗರದ ಮಲ್ಲೇಶ್ (24) ಮೃತ ಯುವಕನಾಗಿದ್ದಾನೆ.
ಮಲ್ಲೇಶ್ ಅಡಿಕೆ ತೋಟದಿಂದ ಮನೆಗೆ ಬರುವಾಗ ಹೆಜ್ಜೇನು ಏಕಾಏಕಿ ನೂರಾರು ಜೇನುಗಳು ಒಮ್ಮೆಲೇ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ
ಮಧ್ಯೆ ಮೃತಪಟ್ಟಿದ್ದಾರೆ . ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



