ಧಾರವಾಡ: ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ವಿನಯ ಕುಲಕರ್ಣಿ ಹಾಗೂ ದರ್ಶನ್ ಒಳ್ಳೆಯ ಸ್ನೇಹಿತರಾಗಿದ್ದಾರೆ. ಜನ ಸಾಮಾನ್ಯರಿಗೆ ಬಿಗ್ ಶಾಕ್; LPG ಬೆಲೆ ಮತ್ತೆ 25 ರೂಪಾಯಿ ಏರಿಕೆ.. ಒಂದು ತಿಂಗಳ ಅಂತರದಲ್ಲಿ 4ನೇ ಸಲ ಏರಿಕೆ
ಮಾಜಿ ಸಚಿವ ವಿನಯ ಕುಲಕರ್ಣಿ ಆರೆಸ್ಟ್ ಆಗುವ ಮುನ್ನ ದರ್ಶನ್ ಅವರ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಈ ವೇಳೆ ಚಕ್ಕಡಿ ಏರಿ ಇಬ್ಬರು ಸಂಭ್ರಮಿಸಿದ್ದರು. ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳು ಹಾಗೂ ವಿನಯ್ ಅವರ ಅಕ್ಕ ಈ ಸಂದರ್ಭದಲ್ಲಿ ಇದ್ದರು.ರಾಬರ್ಟ್ ಸಿನಿಮಾ ಫ್ರೀ ರೀಲೀಸ್ ಗಾಗಿ ನಿನ್ನೆ ಹುಬ್ಬಳಿಗೆ ಬಂದಿದ್ದ ಸಂದರ್ಭದಲ್ಲಿ ಭೇಟಿ ನೀಡಿದ್ದಾರೆ.



