ನವದೆಹಲಿ: ಕೇಂದ್ರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2022ನೇ ಸಾಲಿನ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
https://awards.gov.inಪೋರ್ಟಲ್ನಲ್ಲಿ ಸೆಪ್ಟೆಂಬರ್ ಕೊನೇವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ವರ್ಷದ ‘ರಾಷ್ಟ್ರೀಯ ಕ್ಷೀರ ದಿನ’ವಾದ ನವೆಂಬರ್ 26ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ದೇಶೀಯ ಹಸು/ಎಮ್ಮೆ ತಳಿ ಸಾಕುವ ಉತ್ತಮ ರೈತ, ಉತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ ಮತ್ತು ಉತ್ತಮ ಡೇರಿ ಸಹಕಾರಿ ಸಂಘ/ಡೇರಿ ರೈತ ಉತ್ಪಾದನಾ ಸಂಸ್ಥೆ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಮೂರು ವಿಭಾಗಗಳ ಪ್ರಶಸ್ತಿ ಅನುಕ್ರಮವಾಗಿ 5 ಲಕ್ಷ ರೂಪಾಯಿ, 3 ಲಕ್ಷ ರೂಪಾಯಿ ಹಾಗೂ 2 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ.



