ಹರಿಹರ: ನಗರದ ಕೇಶವನಗರದ ಪಟೇಲ್ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿಂದು ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿದೆ. ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ತೇಲಿ ರವರ ನೇತೃತ್ವದ ಪೊಲೀಸ್ ತಂಡ ದಾಳಿ ಮಾಡಿ, ಜೂಜಾಟದಲ್ಲಿ ತೊಡಗಿದ್ದ 03 ಆರೋಪಿತರನ್ನು ಬಂಧಿಸಿ, 12,370 ರೂ. ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.