ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಫಾರ್ಮ್ ಹೌಸ್ ವೊಂದರಲ್ಲಿ ಕೆಲಸಕ್ಕೆ ಸೇರಿ ಐದೇ ದಿನದಲ್ಲಿ ವ್ಯಕ್ತಿಯೊಬ್ಬ 8 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 6.60 ಲಕ್ಷ ಮೌಲ್ಯದ 132 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಹಿನ್ನೆಲೆ: ಶಿವಮೂರ್ತಿ ಅವರ ಫಾರ್ಮ್ ಹೌಸ್ ನಲ್ಲಿ ಕೆಲಸ ಸೇರಿಕೊಂಡ ವ್ಯಕ್ತಿ ಕಳ್ಳತನ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಚನ್ನಗಿರಿ ಕಣದ ಸಾಲು ಬಡಾವಣೆಯ ಶಿವಮೂರ್ತಿ ಅವರ ಮನೆಯ ಒಡತಿ ಕೆಲಸಗಾರನಿಗೆ ಟೀ ಕೊಟ್ಟು ಬಟ್ಟೆ ಒಣ ಹಾಕಲು ಹೋಗಿದ್ದರು. ಆಗ ಖದೀಮ ತಮ್ಮ ಕೈ ಚಳಕ ತೋರಿಸಿದ್ದು, ಬೀರಿನ ಪಕ್ಕದಲ್ಲಿಯೇ ಇದ್ದ ಕೀ ಮೂಲಕ ಬೀಗ ತೆಗೆದು, ಬೀರಿನಲ್ಲಿದ್ದ 8 ಲಕ್ಷ ಮೌಲ್ಯದ ಚಿನ್ನ ಮತ್ತು 20 ನಗದನ್ನು ಕದ್ದು ಪರಾರಿಯಾಗಿದ್ದಾಗಿ ಎಂದು ದೂರು ದಾಲಿಸಿದ್ದರು.
ಯುಟ್ಯೂಬ್ ನಲ್ಲಿ ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಬೇಕಿದ್ದಾರೆ ಎಂದು ವಿಡಿಯೋ ನೋಡಿ ಕೆಲಸಕ್ಕೆ ಸೇರಿಕೊಂಡಿದ್ದ,ಕೆಲಸಕ್ಕೆ ಸೇರಿ 5 ದಿನದಲ್ಲಿ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದನು. ಈಗ ಆರೋಪಿಯನ್ನು ಬಂದಿಸಲಾಗಿದ್ದು, 6.60 ಲಕ್ಷಮೌಲ್ಯದ 132 ಗ್ರಾಂ ಬಂಗಾರ ವಶಕ್ಕೆ ಪಡೆಯಲಾಗಿದೆ.



