ಚಿತ್ರದುರ್ಗ: ಬಾಲಕನಿಂದ ಮದ್ಯ ಮಾರಾಟ ಮಾಡಿಸಿದ್ದು, ಸಾಬೀತಾಗಿರುವ ಹಿನ್ನೆಲೆ ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಬಾರ್ ಮಾಲೀಕ ಹಾಗೂ ಆತನ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶಿಸಿದೆ. ಹೌದು.. ಮಾರುತಿ ಬಾರ್ ಮಾಲೀಕ ನಿಂಗಪ್ಪ ಮತ್ತು ಅವರ ಮಗ ಸಂತೋಷ್ ವಿರುದ್ಧ ಕ್ರಮಕೈಗೊಳ್ಳಲು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‍ಸಿ ಮತ್ತು ಪ್ರಧಾನ ದಂಡಾಧಿಕಾರಿಗಳು, ಬಾಲ ನ್ಯಾಯ ಮಂಡಳಿ ಆದೇಶಿಸಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಈ ವೇಳೆ ಮಾಲೀಕ ನಿಂಗಪ್ಪ ಕಾನೂನು ಬಾಹಿರವಾಗಿ ಬಾಲಕನನ್ನು ಬಾರ್‍ನಲ್ಲಿ ಕೆಲಸಕ್ಕೆ ಇಟ್ಟುಕೊಂಡು ಬಾರ್ ಹಿಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಲಾಗಿರುತ್ತದೆ ಎಂದು ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರಾದ ಕರಿಬಸವಯ್ಯ ತಿಳಿಸಿದ್ದಾರೆ.