ದಾವಣಗೆರೆ: ಜಿಲ್ಲೆಯಲ್ಲಿಂದು 386 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ.
ದಾವಣಗೆರೆ 243, ಹರಿಹರ 53, ಜಗಳೂರು21, ಚನ್ನಗಿರಿ 29, ಹೊನ್ನಾಳಿ21 , ಹೊರ ಜಿಲ್ಲೆಯಿಂದ 19 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.ಈ ಮೂಲಕ ಸೋಂಕಿತರ ಸಂಖ್ಯೆ 26476ಕ್ಕೆ ಏರಿಕೆಯಾಗಿದೆ. ಇಂದು 203 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 24,096 ಮಂದಿ ಗುಣಮುಖರಾಗಿದ್ಧಾರೆ. ಜಿಲ್ಲೆಯಲ್ಲಿ ಇದುವರೆಗೆ 283 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 2087 ಸಕ್ರಿಯ ಕೇಸ್ ಗಳಿವೆ.
ಹರಿಹರದ ನಿಲಕಂಠ ನಗರದ 6 3 ವರ್ಷದ ಪುರುಷ, ಹುಚ್ಚವ್ವನಹಳ್ಳಿಯ 36 ವರ್ಷದ ಮಹಿಳೆ, ದಾವಣಗೆರೆಯ ಎಸ್ ಕೆಎಸ್ ಬಡಾವಣೆಯ 50 ವರ್ಷದ ಪುರುಷ, ತಾಂಡದ 36 ವರ್ಷದ ಪುರುಷ, ಬಾನುವಳ್ಳಿಯ 26 ವರ್ಷದ ಪುರುಷ, ದಾವಣಗೆರೆ ಡಿಸಿಎಂ ಕೌಟರ್ಸ್ ನ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.



