ಬೆಂಗಳೂರು: ರಾಜ್ಯದಲ್ಲಿ 1185 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 1594 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 875796 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು 15645 ಸಕ್ರಿಯ ಪ್ರಕರಣಗಳಿವೆ. ಇಂದು 11 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 11965 ಮಂದಿ ಸಾವನ್ನಪ್ಪಿದ್ದಾರೆ.ಒಟ್ಟು 903425 ಕೊರೊನಾ ಸೋಂಕಿತರಿದ್ದಾರೆ. 253 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ 06, ಬಳ್ಳಾರಿ 17, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 673, ಬೀದರ್ 11, ಚಾಮರಾಜನಗರ 8, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 18, ಚಿತ್ರದುರ್ಗ 10, ದಕ್ಷಿಣ ಕನ್ನಡ 38, ದಾವಣಗೆರೆ 7, ಧಾರವಾಡ 7, ಗದಗ 08, ಹಾಸನ 27, ಹಾವೇರಿ 9, ಕಲಬುರಗಿ 20, ಕೊಡಗು 07, ಕೋಲಾರ 26, ಕೊಪ್ಪಳ 20, ಮಂಡ್ಯ 19, ಮೈಸೂರು 35, ರಾಯಚೂರು 15, ರಾಮನಗರ 11, ಶಿವಮೊಗ್ಗ 11, ತುಮಕೂರು 44, ಉಡುಪಿ 06, ಉತ್ತರ ಕನ್ನಡ 16, ವಿಜಯಪುರ 17, ಯಾದಗಿರಿ 1 ಪ್ರಕರಣವಿದೆ.



