ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು 206 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 19574ಕ್ಕೆ ಏರಿಕೆಯಾಗಿದೆ.
ಇಂದು ಕೊರೊನಾದಿಂದ 181 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 18269 ಮಂದಿ ಗುಣಮುಖರಾಗಿದ್ದಾರೆ. ಇಂದು ಕೊರೊನಾದಿಂದ ಯಾರು ಕೂಡ ಮೃತಪಟ್ಟಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 251 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1054 ಸಕ್ರಿಯ ಪ್ರಕರಣಗಳಿವೆ.
ಇಂದು ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ 94, ಹರಿಹರ 40, ಜಗಳೂರು 13, ಚನ್ನಗಿರಿ21, ಹೊನ್ನಾಳಿ 36 ಹಾಗೂ ಇತರ ಜಿಲ್ಲೆಯಲ್ಲಿ 02 ಪಾಸಿಟಿವ್ ಪತ್ತೆಯಾಗಿದೆ.



