ಬೆಂಗಳೂರು: ಕೊರೊನಾ ಲಸಿಕೆ ತೆಗೆದುಕೊಂಡ 45 ದಿನ ಮದ್ಯ ಸೇವಿಸುವಂತಿಲ್ಲ ಎಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಹೇಳಿದರು.
ಸ್ವತಃ ತಾವೇ ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಮಾತನಾಡಿದ ಅವರು, ಕೊರೊನಾ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ . ಎಲ್ಲಾ ವಯಸ್ಸಿನವರೂ ಲಸಿಕೆ ತೆಗೆದುಕೊಳ್ಳಬಹುದು. ರಾಜ್ಯದ ಜನರು ಭಯ ಬಿಟ್ಟು ಕೊರೊನಾ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊದಲ ಲಸಿಕೆ ತೆಗೆದುಕೊಂಡ 28 ದಿನಗಳ ನಂತರ ಎರಡನೇ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಲಸಿಕೆ ತೆಗೆದುಕೊಂಡವರು ಮದ್ಯ ಸೇವನೆ ಮಾಡುವುದರಿಂದ ಕೊರೊನಾ ಲಸಿಕೆ ವರ್ಕ್ ಆಗುವುದಿಲ್ಲ. ಹೀಗಾಗಿ ಒಟ್ಟು 45 ದಿನ ಮದ್ಯ ಸೇವಿಸುವಂತಿಲ್ಲ. ಕನಿಷ್ಟ 45 ದಿನ ಮದ್ಯ ಸೇವನೆಯಿಂದ ದೂರು ಇರಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.



