Connect with us

Dvgsuddi Kannada | online news portal | Kannada news online

ನೈಟ್ ಕರ್ಫ್ಯೂ 10ರ ಬದಲು 11.30ರಿಂದ ಜಾರಿಗೊಳಿಸಿ; ಸಿಎಂಗೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಮನವಿ

ಪ್ರಮುಖ ಸುದ್ದಿ

ನೈಟ್ ಕರ್ಫ್ಯೂ 10ರ ಬದಲು 11.30ರಿಂದ ಜಾರಿಗೊಳಿಸಿ; ಸಿಎಂಗೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಮನವಿ

ಬೆಂಗಳೂರು: ಬ್ರಿಟನ್​ನಲ್ಲಿ ಅತ್ಯಂತ ವೇಗವಾಗಿ ಹರಡುವ ಹೊಸ ಸ್ವರೂಪದ ಕೊರೊನಾ ವೈರಸ್​ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿ ಇರಲಿದೆ. ಹೊಸ ವರ್ಷದ ಸಂಭ್ರಮದಲ್ಲಿರುವ ಈ ಸಮಯದಲ್ಲಿ ಈ ನೈಟ್​ ಕರ್ಫ್ಯೂ ಅನೇಕ ಉದ್ಯಮಗಳಿಗೆ ಪೆಟ್ಟು ನೀಡಲಿದೆ. ಅದರಲ್ಲಿ ಮುಖ್ಯವಾಗಿ ಬಾರ್​ ಅಂಡ್​ ರೆಸ್ಟೋರೆಂಟ್​ ಉದ್ದಿಮೆಗೆ ಈ ಕರ್ಫ್ಯೂ ಭಾರೀ ಪೆಟ್ಟು ನೀಡಲಿದೆ. ಈ ಹಿನ್ನಲೆ ರಾತ್ರಿ 10ರ ಬದಲು 11. 30ರಿಂದ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡುವಂತೆ ಬಾರ್​ ಅಂಡ್​ ರೆಸ್ಟೋರೆಂಟ್ ಮಾಲೀಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ 10 ದಿನಗಳಲ್ಲಿ ಬ್ರಿಟನ್​ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾಜ್ಯಕ್ಕೆ ಆಗಮಿಸಿದ್ದು,ಈ ಹಿನ್ನೆಲೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬ್ರಿಟನ್​ನಿಂದ ಆಗಮಿಸಿರುವವರ ಪತ್ತೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಇದರ ಜೊತೆಗೆ ಇಂದಿನಿಂದ ಡಿ. 2ರವರೆಗೆ ನೈಟ್​ ಕರ್ಫ್ಯೂ ಜಾರಿಗೆ ಸರ್ಕಾರ ನಿರ್ಧರಿಸಿದೆ. ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾರ್​ ಮತ್ತು ರೆಸ್ಟೋರೆಂಟ್​ಗಳಿಗೆ ಉತ್ತಮ ವ್ಯಾಪಾರವಾಗುತ್ತದೆ. ವರ್ಷಾಂತ್ಯದಲ್ಲಿ ತಡರಾತ್ರಿವರೆಗೈ ಅತಿ ಹೆಚ್ಚಿನ ವಹಿವಾಟು ನಡೆಯುತ್ತದೆ. ಈ ಹಿನ್ನಲೆ ಒಂದೂವರೆ ಗಂಟೆ ತಡವಾಗಿ ನಿಷೇಧಾಜ್ಞೆ ವಿಧಿಸುವಂತೆ ಮನವಿ ಮಾಡಲಾಗಿದೆ.

ಅಷ್ಟೇ ಅಲ್ಲದೇ , ಬಾರ್​ಗಳ ಲೈಸೆನ್ಸ್​ ಪುನರ್​ನವೀಕರಣದ ಶುಲ್ಕವನ್ನು ಕಟ್ಟುವ ಸಮಯ ಇದಾಗಿದೆ. ಈ ಸಮಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದರೆ, ಕಷ್ಟವಾಗಲಿದೆ. ಅನೇಕರು ಸಾಲ ಮಾಡಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು ವಹಿವಾಟು ಮಾಡುತ್ತಿದ್ದಾರೆ. ಹಾಗಾಗಿ ಹಾಗಾಗಿ ಕನಿಷ್ಠ 11.30ರವರಗೆ ಸಮಯ ಸಿಕ್ಕರೆ ಸ್ವಲ್ಪಮಟ್ಟಿಗೆ ವ್ಯಾಪಾರ ಉತ್ತಮವಾಗಬಹುದು. ಈ ಹಿನ್ನಲೆ ಈ ಸಮಯವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ರಾತ್ರಿ 11 ಗಂಟೆಯಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಒಂದೂವರೆ ಗಂಟೆ ವಿಳಂಬವಾಗಿ ನಿಷೇಧಾಜ್ಞೆ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top