ನವದೆಹಲಿ : ಭಾರತದಲ್ಲಿ ಕೊರೊನಾ ತುರ್ತು ಲಸಿಕೆಯಾಗಿ ಕೋವಿಶೀಲ್ಡ್ ಬಳಕೆಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯ ತಜ್ಞರ ಸಮಿತಿ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ (ಡಿಸಿಜಿಐ) ಶಿಫಾರಸ್ಸು ಮಾಡಿದೆ.
ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸಿವೆ. ಕೊರೊನಾ ವೈರಸ್ ಲಸಿಕೆಯನ್ನು ಡಿಸಿಜಿಐ ಅನುಮತಿ ನೀಡಿದರೆ, ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯ ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕತಾಗುತ್ತದೆ.
ಡಿಸಿಜಿಐ ವಿ.ಜಿ.ಸೋಮಾನಿ ಅವರು ರಚಿಸಿದ ತಜ್ಞರ ಸಮಿತಿಯು ಈ ವಾರ ಎರಡನೇ ಬಾರಿಗೆ ಸಭೆಯನ್ನು ಇಂದು ನಡೆಸಿದರು. ಇಂತಹ ಸಭೆಯಲ್ಲಿ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ COVID-19 ಲಸಿಕೆಗೆ ತುರ್ತು ಬಳಕೆಗೆ ಶಿಫಾರಸ್ಸು ಮಾಡಿದೆ. ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಸಿದ ಆಕ್ಸ್ ಫರ್ಡ್-ಆಸ್ಟ್ರಾಜೆನೆಕಾ COVID-19 ಲಸಿಕೆಯು ಶೇ.70.4% ರಷ್ಟು ಪರಿಣಾಮ ಬೀರಿದೆ. ಯಾವುದೇ ಅಡ್ಡ ಪರಿಣಾಮ, ತೊಂದರೆ ಉಂಟಾಗಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.