ಬೆಂಗಳೂರು: ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರ ಬ್ರಿಟನ್ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ 07ಕ್ಕೆ ಏರಿಕೆಯಾದಂತಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ .ಸುಧಾಕರ್, ರಾಜ್ಯದಲ್ಲಿ ಬ್ರಿಟನ್ ನಿಂದ ಬಂದಿದ್ದ 1614 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 27 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರದಲ್ಲಿ ಇದೀಗ 7 ಜನರಿಗತೆ ಬ್ರಿಟನ್ ರೂಪಾಂತರಿ ಬ್ರಿಟನ್ ವೈರಸ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ 7 ಜನರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿಯೂ ಕೂಡ ಬ್ರಿಟನ್ ಸೋಂಕು ಇರುವುದು ಪತ್ತೆಯಾಗಿದೆ ಎಂದರು.
ದೇಶದಾದ್ಯಂತ ಬ್ರಿಟನ್ ನಿಂದ ಬಂದ 107 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದಲ್ಲಿ 20 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿತ್ತು. ಇದರಲ್ಲಿ ದೆಹಲಿ 08, ಕರ್ನಾಟಕ 07 ಜನರಿಗೆ ಬ್ರಿಟನ್ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಪತ್ತೆಯಾದ 07 ಜನರಲ್ಲಿ ಬೆಂಗಳೂರು 03, ಶಿವಮೊಗ್ಗ 04 ಜನ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 3 ರಿಂದ 39 ಜನ ಸಂಪರ್ಕಕ್ಕೆ ಬಂದಿದ್ದರು. ಅರನ್ನು ಈಗಾಗಲೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಶಿವಮೊಗದಲ್ಲಿ 04 ಜನ 07 ಜನರೊಂದಿಗೆ ಸಂಪರ್ಕ ಹೊಂದಿದ್ದರು. ಅವರನ್ನು ಕೂಡ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.