ಬೆಂಗಳೂರು : ಕೊರೊನಾ ಆರ್ಥಿಕ ಸಂಕಷ್ಟ ಹಿನ್ನೆಲೆ ರಾಜ್ಯ ಸರ್ಕಾರ, ಸರ್ಕಾರಿ ನೌಕರಿಗೆ ಬಿಗ್ ಶಾಕ್ ನೀಡಿದೆ. 2021ರ ಜನವರಿ 1ರಿಂದ ಡಿಸೆಂಬರ್ 31 ವರೆಗೆ ಎಲ್ಲ ಸರ್ಕಾರಿ ಅಧಿಕಾರಿಗಳ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಎಲ್ಲ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಅನ್ವಯ ಆಗಲಿದೆ.ಆದರೆ, ಈ ಅವಧಿಯಲ್ಲಿ ನಿವೃತ್ತರಾಗುವರಿಗೆ ಈ ಸೌಲಭ್ಯ ಇರಲಿದೆ.



