ಡಿವಿಜಿ ಸುದ್ದಿ, ಬೆಂಗಳೂರು: ನವೆಂಬರ್ 17 ರಿಂದ ಪದವಿ ಕಾಲೇಜ್ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಈ ಶೈಕ್ಷಣಿಕ ವರ್ಷ ಮುಗಿಯೋವರೆಗೂ ವಿದ್ಯಾರ್ಥಿಗಳು ಮತ್ತು ಉನ್ಯಾಸಕರಿಗೆ ರಜೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸಲಹೆಗಾರ ಪ್ರೊ. ದೊರೆಸ್ವಾಮಿ ಹೇಳಿದರು.
ಕಾಲೇಜ್ ಆರಂಭರ ಕುರಿತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು , ರಾಜ್ಯ ಸರ್ಕಾರ ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧಾರ ಕೈಗೊಂಡಿದೆ. ಈ ವರ್ಷದ ಶೈಕ್ಷಣಿಕ ವರ್ಷ ಮುಗಿಯುವ ವರೆಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ರಜೆ ಇರುವುದಿಲ್ಲ. ಕಂಟಿನ್ಯೂವ್ ಕ್ಲಾಸ್ ಗಳು ಇರಲಿದ್ದು, ಸೋಮವಾರದಿಂದ ಶುಕ್ರವಾರದ ವರೆಗೆ ಕ್ಲಾಸ್ ನಡೆಯದಿದ್ದು, ಶನಿವಾರ- ಭಾನುವಾರ ಆನ್ ಲೈನ್ ಕ್ಲಾಸ್ ಗಳು ನಡೆಯಲಿವೆ. ಇದು ಪರೀಕ್ಷೆ ಮುಗಿಯುವರೆಗೂ ಮುಂದುವರಿಯಲಿದೆ ಎಂದರು.
ವಿದ್ಯಾರ್ಥಿಗಳನ್ನು ಕ್ಲಾಸ್ ಗಳಿಗೆ ಕರೆ ತರಲು ಮೆಂಟರ್ ಸಿಸ್ಟಮ್ ಜಾರಿಗೆ ತಂದಿದ್ದು, ಪ್ರಿನ್ಸಿಪಾಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಒಂದು ಕ್ಲಾಸ್ ನಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶಿಫ್ಟ್ ಪ್ರಕಾರ ಆನ್ ಲೈನ್ ಕ್ಲಾಸ್. ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸದ್ಯಕ್ಕೆ ಶಾಲೆ, ಯುಸಿ ಕಾಲೇಜ್ ಓಪನ್ ಇಲ್ಲ. ಪದವಿ ಕಾಲೇಜು ಸಾಧಕ-ಭಾದಕ ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದರು.



