ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಶಾಲಾ-ಕಾಲೇಜ್ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಆದರೆ ನವೆಂಬರ್‌ನಲ್ಲಿ ಕಾಲೇಜು ಪ್ರಾರಂಭ ಮಾಡಲು ಚಿಂತನೆ ಇದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ನಗರದಲ್ಲಿ ಪ್ರತಿಭಟನಾ ನಿರತ ಪಿಯುಸಿ ಉಪನ್ಯಾಸಕ ಅಭ್ಯರ್ಥಿ ಭೇಟಿ ಮಾಡಿದ ನಂತರ ಮಾತನಾಡಿ, ಕೊರೊನಾ ಇದ್ದರು ಕೌನ್ಸಿಲಿಂಗ್ ನಡೆಯುತ್ತಿದೆ. ವಿಶೇಷವಾಗಿ ನಿಮಗೆ ಮಾತ್ರ ಕೊರೊನಾ ಸಮಯದಲ್ಲಿ ಕೌನ್ಸಿಲಿಂಗ್ ಮಾಡಲಾಗಿದೆ. ಆದರೆ ಆದೇಶ ಪತ್ರದ ಬಗ್ಗೆ ಯಾರಿಗೂ ಆತಂಕ ಬೇಡ. ಸಿಎಂ ಭರವಸೆ ನೀಡಿದ್ದು, ಕಾಲೇಜು ಪ್ರಾರಂಭ ಆದ ಕೂಡಲೇ ಆದೇಶದ ಪ್ರತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನಾ ನಿರತ ಉಪನ್ಯಾಸಕರು ಸಚಿವರ ಮಾತಿಗೆ ಒಪ್ಪಲಿಲ್ಲ . ನಮಗೆ ಆದೇಶದ ಪ್ರತಿ ಕೊಡಿ. ಅಲ್ಲಿಯವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ. ನಮ್ಮ ಜೀವನ ದುಸ್ಥರವಾಗಿದೆ ಎಂದು ಒತ್ತಾಯ ಮಾಡಿದರು.
ನವೆಂಬರ್ ನಲ್ಲಿ ಕಾಲೇಜು ಪ್ರಾರಂಭದ ಚಿಂತನೆ ಇದೆ. ಸಿಎಂ ಅವರೊಂದಿಗೆ ಮುಂದಿನ ವಾರ ಸಭೆ ಇದ್ದು, ಅಲ್ಲಿ ಕಾಲೇಜು ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.