- ಡಿವಿಜಿ ಸುದ್ದಿ, ಚಿತ್ರದುರ್ಗ
- ಸಾಣೇಹಳ್ಳಿಯ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
- ಹೊಸದುರ್ಗ ತಾಲ್ಲೂಕಿನ ತರಳಬಾಳು ಶಾಖಾ ಮಠ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಮಾತು
- ಸಾಣೇಹಳ್ಳಿಯ ನಾಟಕೋತ್ಸವ ನಾಡಹಬ್ಬವಿದ್ದಂತೆ ಎಂದು ಸಿಎಂ ಯಡಿಯೂರಪ್ಪ
- ನಾಟಕೋತ್ಸವದ ಶಿಸ್ತು, ಅಚ್ಚುಕಟ್ಟುತನ, ಮಕ್ಕಳ ನೃತ್ಯರೂಪಕ, ಸುಶ್ರಾವ್ಯ ವಚನ ಸಂಗೀತ ಹಾಗೂ ನಾಟಕಗಳು ನಮ್ಮೆಲ್ಲರ ನೋವುಗಳನ್ನು ಮರೆಸುತ್ತವೆ
- ಸಾಣೇಹಳ್ಳಿ ರಂಗಭೂಮಿ ಹಾಗೂ ಮಠದ ಬಗ್ಗೆ ಮೆಚ್ಚುಗೆ
- ಕೊರೊನಾ ಕಾರಣದಿಂದ ಕಾರ್ಯಕ್ರಮದ ಸ್ವರೂಪ ಬದಲಾವಣೆ
- ಅಂತರ್ಜಾಲದ ಮೂಲಕ ನಾಟಕೋತ್ಸವ ನಡೆಸಿದ್ದು ಶ್ಲಾಘನೀಯ
- ಇಂತಹ ನಾಟಕೋತ್ಸವದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳುವಂತಹ ಸಂದರ್ಭ ಮತ್ತೆ ಸೃಷ್ಟಿಯಾಗಲಿ
- ಈ ಕಾರ್ಯಕ್ರಮಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಆಶ್ವಾಸನೆ
- ‘350 ಮನೆಗಳಿರುವ ಹಳ್ಳಿಯಲ್ಲಿ ನಡೆಯುವ ನಾಟಕೋತ್ಸವ ರಾಜ್ಯದ ಗಮನ ಸೆಳೆದಿದೆ
- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗ್ರಾಮೀಣ ಪ್ರದೇಶದಲ್ಲಿದ್ದೇ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಧರ್ಮ, ಸಮಾಜಸೇವೆ, ಸಾಹಿತ್ಯ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ
- ನಾಡಿನ ಅಭಿವೃದ್ಧಿ ಕೇವಲ ಆರ್ಥಿಕತೆ, ಶೈಕ್ಷಣಿಕ, ಸಾಮಾಜಿಕ ಪ್ರಗತಿಯನ್ನು ಅವಲಂಬಿಸಿಲ್ಲ
- ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅವಲಂಬಿಸಿದೆ ಎನ್ನುವುದು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತುಎಂದು ಹಿರಿಯ ಗುರುಗಳನ್ನು ಸ್ಮರಿಸಿದರು

- ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿಕೆ
- ಅನ್ನ, ಅಕ್ಷರ ಹಾಗೂ ಔಷಧ ವ್ಯಾಪಾರದ ಸರಕುಗಳಾಗಿವೆ
- ಈ ಸರಕಿನ ಸಂಸ್ಕೃತಿಯನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ರೂಪಿಸಿದೆ
- ಇದರಿಂದ ಹೊಸ ಪೀಳಿಗೆಗೆ ಅನುಕೂಲವಾಗಲಿದೆ
- 6ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ಪಡೆಯುವ ಅಂಶ ಒಳಗೊಂಡಿದೆ
- ಏಳು ದಶಕಗಳ ಶಿಕ್ಷಣ ವ್ಯವಸ್ಥೆ ನಮ್ಮ ಸ್ವಂತಿಕೆಗಳ ಬಗ್ಗೆ ಕೀಳರಿಮೆ ಮೂಡಿಸಿದೆ
- ಪದವಿಗಳು ಉದ್ಯೋಗ ಸೃಷ್ಟಿಸುವ ಬದಲು ಪದವೀಧರರ ಬದುಕು ಅತಂತ್ರವಾಗುವಂತೆ ಮಾಡಿದೆ
- ನೂತನ ಶಿಕ್ಷಣ ನೀತಿಯಿಂದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಕ್ರೀಡೆ ಪಠ್ಯದ ಭಾಗವಾಗಲಿದೆ



