ಡಿವಿಜಿ ಸುದ್ದಿ, ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಾಳೆ (ಅ.24) ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆಳಿಗ್ಗೆ 11.15 ಕ್ಕೆ ದಾವಣಗೆರೆಯ ಜಿ.ಎಂ.ಐ.ಟಿ ಮೈದಾನದ ಹೆಲಿಪ್ಯಾಡ್‍ಗೆ ಬಂದು ತಲುಪಿ, 11.30ಕ್ಕೆ ದಾವಣಗೆರೆ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮದ ಸ್ಥಳದಿಂದ ಕಾರಿನಲ್ಲಿ ಹೊರಟು 12.40 ಕ್ಕೆ ಜಿ.ಎಂ.ಐ.ಟಿ ಮೈದಾನ ತಲುಪುವರು ಹಾಗೂ 1.30ಕ್ಕೆ ಜಿ.ಎಂ.ಐ.ಟಿ ಮೈದಾನದ ಹೆಲಿಪ್ಯಾಡ್‍ನಿಂದ ಹೊರಟು ತುಮಕೂರಿಗೆ ತೆರಳುವರು.