ಚಿತ್ರದುರ್ಗ : ವೀರಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯತದಲ್ಲಿ 80ಕ್ಕೂ ಹೆಚ್ಚು ಉಪಪಂಗಡಗಳಿದ್ದು, ಕಡು ಬಡವರು, ಹಿಂದುಳಿದವರು ಸಹ ವೀರಶೈವ ಲಿಂಗಾಯತ ಸಮಾಜದಲ್ಲಿದ್ದಾರೆ. ಆದ್ದರಿಂದ ಒಳ ಮೀಸಲಾತಿ ಜತೆಗೆ ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವಿ ಮಾಡಿದರು.
ವೀರಶೈವ ಲಿಂಗಾಯತ ಪರಿಕಲ್ಪನೆಯಡಿಯ ಒಳ ಪಂಗಡಗಳು ಸಾಕಷ್ಟು ಶೋಷಣೆ ಅನುಭವಿಸುತ್ತಿವೆ. ಈ ಸಮುದಾಯದಲ್ಲೂ ತುಂಬಾ ಜನ ತುಳಿತಕ್ಕೆ ಒಳಗಾಗಿದ್ದಾರೆ. ಅಂತವರನ್ನು ಗುರುತಿಸಿ ಬೆಳಕಿಗೆ ತರಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನಹರಿಸಿ ನ್ಯಾಯ ಕಲ್ಪಿಸಬೇಕಿದೆ ಎಂದರು.



