ಡಿವಿಜಿ ಸುದ್ದಿ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲ, ಆಂಧ್ರಪ್ರದೇಶದಲ್ಲೂ ತಮ್ಮ ಉದ್ದದ ಜಡೆಯಿಂದಲೇ ಇವರು ಖ್ಯಾತಿ ಪಡೆದಿದ್ದ ಪಾಲಯ್ಯ ಇಂದು ವಿಧಿವಶರಾಗಿದ್ದಾರೆ.
ದೇವರ ಹರಕೆಗೆ 20 ಅಡಿ ಉದ್ದರ ಜಡೆ ಬಿಟ್ಟಿದ್ದ 103 ವರ್ಷದ ಶತಾಯುಷಿ ಪಾಲಯ್ಯ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿಯ ಪಾಲಯ್ಯ, ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಜೀವನ ಪೂರ್ತಿಐದಾರು ಕೆ.ಜಿ. ತೂಕದ ಕೂದಲು ಹೊತ್ತು ಬದುಕಿದ್ದರು.
ಉದ್ದವಾದ ಜಡೆಯಿಂದಲೇ ಪಾಲಯ್ಯ ಅವರು ಪ್ರಸಿದ್ಧಿ ಪಡೆದಿದ್ದರು. ಅಂತ್ಯಕ್ರಿಯೆ ವೇಳೆ 20 ಅಡಿಯ ಜಡೆಯನ್ನು ಸಮಾಧಿಯಲ್ಲಿ ಹಾಸಿ ಅದರ ಮೇಲೆ ಮೃತದೇಹ ಮಲಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಪಾಲಯ್ಯ ಹುಟ್ಟಿದಾಗಿನಿಂದಲೂ ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿಲ್ಲ. ತಮ್ಮ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಎತ್ತುಗಳನ್ನು ಭಕ್ತಿಯಿಂದ ಸಮರ್ಪಿಸುತ್ತಾ ಕೊನೆವರೆಗೂ ಗೋವು ಪಾಲಕರಾಗಿಯೇ ಕೊನೆಯುಸಿರೆಳೆದಿದ್ದಾರೆ.