ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿಯ ರಥಕ್ಕೆ 2.50 ಕೋಟಿ ವಿಮೆಯನ್ನು ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿ ಒದಗಿಸಿದೆ. ರಥವನ್ನು ಬೆಲೆಬಾಳುವ ಮರದಿಂದ ನಿರ್ಮಿಸಲಾಗಿದ್ದು, ನೈಸರ್ಗಿಕ ಅವಘಡ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ.
ಈ ಬಗ್ಗೆ ಚಿತ್ರದುರ್ಗದ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿಯ ವ್ಯವಸ್ಥಾಪಕ ಎ.ಎಂ.ಶರಣಯ್ಯ ಮಾಹಿತಿ ನೀಡಿದ್ದು, ಸತತ ನಾಲ್ಕು ವರ್ಷದಿಂದ ರಥಕ್ಕೆ ವಿಮೆ ನೀಡಲಾಗುತ್ತಿದೆ. ಆದರೆ, ಈ ವರ್ಷ ಮಳೆ, ಗಾಳಿ, ಬೆಂಕಿ ಸೇರಿದಂತೆ ನೈಸರ್ಗಿಕ ಹಾನಿಗಳಿಂದ ಸಂಭವಿಸಬಹುದಾದ ಅವಘಡಗಳಿಗೆ ವಿಮೆ ನೀಡಲಾಗಿದೆ. ಜತೆಗೆ ಜಾತ್ರೆಗಾಗಿ ರಥವನ್ನು ಕಟ್ಟುವ, ಜಾತ್ರೆಯ ದಿನದಂದು ರಥವನ್ನು ಚಲಾಯಿಸುವ ಸಾಂಪ್ರದಾಯಿಕ ಕುಲಕಸುಬುಗಳ ಒಟ್ಟು 85 ಜನರಿಗೆ 2 ಲಕ್ಷ ಮತ್ತು ರಥೋತ್ಸವದಲ್ಲಿ ಭಾಗವಹಿಸುವ 25 ಜನ ಅನಾಮಿಕ ಭಕ್ತರಿಗೆ ತಲಾ 1 ಲಕ್ಷ ವಿಮೆ ಒದಗಿಸಲಾಗುವುದು. ವಿಮೆ ಸೌಲಭ್ಯ ನೀಡಲು ದೇವಾಲಯದಿಂದ 52,364 ರೂಪಾಯಿಯನ್ನು ಕಂಪನಿ ಪಡೆದುಕೊಂಡಿದೆ.



