ಚಿತ್ರದುರ್ಗ:ಡಿಸೇಲ್, ಪೆಟ್ರೋಲ್ ಏರಿಕೆಯಾಗುತ್ತಿದ್ದು, ಜನ ರೊಚ್ಚಿಗೆ ಎದ್ದಿದ್ದಾರೆ. ಏಕೆ ಸುಮ್ನೇ ಕೂತಿದ್ದಿರಿ ಎಂದು ಜನ ಕೇಳುತ್ತಿದ್ದು, ಶೀಘ್ರವೇ ಬೆಲೆ ಏರಿಕೆ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಮುರುಘಾಮಠಕ್ಕೆ ಇಂದು ಭೇಟಿ ನೀಡಿದ ಬಳಿಕಾ ಅವರು ಸುದ್ದಿಗಾರರ ಜೊತೆ ಮಾತನಾಡಿ, ನಿನ್ನೆ ಮಂಡಿಸಿದಂತಹ ಬಜೆಟ್ ನಿಂದ ಯಾವ ಜನರಿಗೆ ಉತ್ಸಾಹನೇ ಇಲ್ಲ, ಯಾವ ವರ್ಗದವರಿಗೂ ಸಮಾಧಾನ ಇಲ್ಲ. ಬಹಳ ವರ್ಸ್ಟ್ ಬಜೆಟ್ ಎಂದು ದೂರಿದ್ದಾರೆ.
ರೈತರಿಗೆ ,ಕಾರ್ಮಿಕರಿಗೆ , ಸರ್ಕಾರಿ ನೌಕರರಿಗೂ ಎಲ್ಲಾ ವರ್ಗಕ್ಕೆ ತುಂಬಾ ತೊಂದರೆ ಆಗಿದೆ. ಸಂಕಷ್ಟದ ಕಾಲವಾದ ಕೊರೊನಾದಲ್ಲಿ ಬಿಜೆಪಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಹಾಸಿಗೆ, ಬೆಡ್, ದಿಂಬು, ಔಷಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜನರೇ ಮಾತನಾಡಿರುತ್ತಾರೆ ಇಂತಹ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು.
ರೈತರ ವಿರುದ್ದ ಕಾನೂನುಗಳನ್ನು ಜಾರಿಗೆ ತಂದಿರುವ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದು, ನಮ್ಮೆಲ್ಲಾ ರೈತರ ಪರ ನಿಲ್ಲುವ ಕಾರ್ಯಕ್ರಮಗಳನ್ನ ನಾಳೆ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.