ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪ್ರಸಿದ್ಧ ನಾಯಕನಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮಾ. 20 ರಂದು ಭಾನುವಾರ ನಡೆಯಲಿದೆ. ಇಂದು ರಾತ್ರಿ ಮಯೂರ ವಾಹನೋತ್ಸವ, ಮಾ.16 ರಂದು ರಥಕ್ಕೆ ಕಳಸ ಸ್ಥಾಪನೆ ಮತ್ತು ರಾತ್ರಿ ಗಜ ವಾಹನೋತ್ಸವ, ಮಾ. 17 ರಂದು ಸಿಂಹ ವಾಹನೋತ್ಸವ, 18 ರಂದು ಅಶ್ವ ವಾಹನೋತ್ಸವ, ಮಾ. 19 ರಂದು ರಥಕ್ಕೆ ತೈಲಾಭಿಷೇಕ ನಡೆಯಲಿದೆ. ಮಾ. 20 ರಂದು ಪ್ರಾತಃ ಕಾಲದಲ್ಲಿ ವೃಷಭ ವಾಹನದೊಂದಿಗೆ ಚಿಕ್ಕ ರಥೋತ್ಸವ ನಂತರ ದೊಡ್ಡ ರಥೋತ್ಸವ ನಡೆಯಲಿದೆ.



