ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಭದ್ರಾ ಬಫರ್ ಝೋನ್ ಜಾರಿ ವಿರೋಧಿಸಿ ರೈತರು ಸಾಮೂಹಿಕ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಭದ್ರಾ ಬಫರ್ ಝೋನ್ ಜಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೊರ ಹಾಕಿದ್ಧಾರೆ. ಬಫರ್ ಝೋನ್ ಜಾರಿಗೂ ಮುನ್ನ ದಯಾ ಮರಣ ಕೋರಿ ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಸೇರಿದಂತೆ 10 ಗ್ರಾಮಗಳ ಜನ ಪತ್ರಗಳನ್ನು ಬರೆದಿದ್ದಾರೆ.
ಈ ಹಿಂದೆ ಜನರನ್ನ ಒಕ್ಕಲೆಬ್ಬಿಸಿದ್ದ ಸರ್ಕಾರ, ಇಲ್ಲಿ ಪುನರ್ ವಸತಿ ಕಲ್ಪಿಸಲಾಗಿತ್ತು, ಈಗ ಮತ್ತೆ ಒಕ್ಕಲೆಬ್ಬಿಸಲು ರೂಪಿಸಿದ ಬಫರ್ ಝೋನ್ ಗೆ ನಮ್ಮ ವಿರೋಧವಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



