ಡಿವಿಜಿ ಸುದ್ದಿ, ಯಳಂದೂರು: ಚಾಮರಾಜನಗರ ಜಿಲ್ಲೆಯ ಫಾರಂ ಹೌಸ್ ವೊಂದರಲ್ಲಿ ಹೆಬ್ಬಾವು ನಾಯಿಯನ್ನು ನುಂಗಿದ ಘಟನೆ ನಡೆದಿದೆ.
ತಾಲ್ಲೂಕಿನ ಮುರಟಿಪಾಳ್ಯ ಸಮೀಪದ ಫಾರಂ ಹೌಸ್‌ನ ಸಾಕು ನಾಯಿ ನುಂಗಿದ್ದ ಹೆಬ್ಬಾವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ಶನಿವಾರ ಸಂರಕ್ಷಿಸಿ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ.ಹರೀಶ್ ಒಡೆತನದ ಜಾಕ್ನಿಲ್ ಫ್ಯಾಕ್ಟರಿ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಇದರಿಂದ ಕಾರ್ಮಿಕರು ಮತ್ತು ಮಾಲೀಕರ ಓಡಾಟಕ್ಕೆ ತೊಂದರೆಯಾಗಿತ್ತು. ನೆಲವಾಸಿಯಾದ ಇದನ್ನು ಸುರಕ್ಷಿತವಾಗಿ ಇಡಿಯಲಾಯಿತು.
ಇಂಡಿಯನ್ ರಾಕ್ ಫೈತಾನ್ ಹೆಸರಿನ ಹೆಬ್ಬಾವು ಈ ಭಾಗಗಳಲ್ಲಿ ವಿಶೇಷವಾಗಿ ಕಾಣಸಿಕೊಳ್ಳುತ್ತವೆ. 4 ಮೀಟರ್ ತನಕ ಬೆಳೆಯುತ್ತದೆ. ವಿಷರಹಿತ ಉರಗ ವಾಗಿದ್ದು, ಜನರು ಆತಂಕ ಪಡಬೇಕಿಲ್ಲ.