ನವದೆಹಲಿ: ಬಜೆಟ್ ಮಂಡನೆ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹೆಚ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದು ಮತ್ತೆ ಪೆಟ್ರೋಲ್, ಡಿಸೇಲ್ ದರ ಏರಿಕೆಗೆ ಕಾರಣವಾಗುತ್ತದೆ ಎಂಬ ಆತಂಕ ಎಲ್ಲರಲ್ಲಿ ಶುರುವಾಗಿತ್ತು. ಆದರೆ, ಈ ಆತಂಕಕ್ಕೆ ನೆಮ್ಮದಿ ನೀಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆ ಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಏರಿಕೆ ಯಿಂದ ಪೆಟ್ರೋಲ್ ಮೇಲೆ 2.50 ರೂ. ಡೀಸೆಲ್ ಮೇಲೆ 4 ರೂ. ಹೆಚ್ಚಾಗುವ ಆತಂಕ ಮೂಡಿತ್ತು. ಆದರೆ, ಇಂಧನ ದರ ಏರಿಕೆಗೆ ಮೂಲ ಅಬಕಾರಿ ಸುಂಕ ಮತ್ತು ಪ್ರಸ್ತುತ ಅವುಗಳ ಮೇಲೆ ವಿಧಿಸಲಾಗುತ್ತಿರುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನುಕಡಿತ ಮಾಡಲಾಗುವುದು ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಅಂದ ಹಾಗೇ ಇಂಧನ ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ತನ್ನೊಂದಿಗೆ ಇರಿಸಿಕೊಳ್ಳುವ ಕೇಂದ್ರದ ಉದ್ದೇಶವೇ ಈ ಕ್ರಮಕ್ಕೆ ಕಾರಣ ಎಂದು ಹೇಳಬಹುದು.



