ಡಿವಿಜಿ ಸುದ್ದಿ, ಬೆಂಗಳೂರು : ಉಪ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ನೈತಿಕ ಮುನ್ನಡೆ ಅಲ್ಲ. ಇದು ಆಡಳಿತ ಯಂತ್ರದ ದುರುಪಯೋಗ ಎಂದು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ಉಪ ಚುನಾವಣೆಯಲ್ಲಿ ಹಣಬಲ-ತೋಳ್ಬಲವನ್ನು ಉಪಯೋಗಿಸಲಾಗಿದೆ. ಜೊತೆಗೆ ಆಡಳಿತ ಯಂತ್ರದ ಸಂಪೂರ್ಣ ದುರುಪಯೋಗವಾಗಿದೆ. ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಯಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಇದು ನೈತಿಕ ಮುನ್ನಡೆ ಅಲ್ಲ ಎಂದರು.
ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯ ಫಲಿತಾಂಶ ಕೆಲ ಹೊತ್ತಿನಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ. ಆದರೂ ಅಂತಿಮ ಫಲಿತಾಂಶ ಬರಬೇಕಿದೆ.