ದಾವಣಗೆರೆ: ಯಡಿಯೂರಪ್ಪ ಸಿಎಂ ಆಗಿ ಜಾಸ್ತಿ ದಿನ ಮುಂದುವರೆಯಲ್ಲ. ಸಿಎಂ ಎಲ್ಲರಿಗೂ ಮೋಸ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಬಿಎಸ್ವೈ ವಿರುದ್ಧ ಮತ್ತೆ ಹರಿಹಾಯ್ದರು.
ಹರಿಹರದಲ್ಲಿ ಮಾತನಾಡಿದ ಅವರು,ವಿಜಯೇಂದ್ರ ವಸೂಲಿ ಮಾಡುತ್ತಾ ಹೋಗಲಿ, ಎಲ್ಲಾ ಖಾತೆಗಳನ್ನು ಬಸವರಾಜ್ ಬೊಮ್ಮಾಯಿಗೆ ಕೊಡಲಿ.ಬಿಜೆಪಿ ಹೈಕಮಾಂಡ್ಗೆ ನನ್ನನ್ನ ಕೈ ಬಿಟ್ಟರೆ ವೀರಶೈವ ಲಿಂಗಾಯತರು ದೂರ ಆಗ್ತಾರೆ ಎಂದು ಯಡಿಯೂರಪ್ಪ ಹೆದರಿಸಿದ್ದಾರೆ. ಶಾಸಕರು ಅವರ ಬಳಿ ಹೋದ್ರೆ ಅನುದಾನ ಇಲ್ಲಾ ಅಂತಾರೆ. ವೀರಶೈವ ಪ್ರಾಧಿಕಾರ ಮಾಡಿ ಹಣ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಖಜಾನೆಯಲ್ಲಿಯೇ ಹಣವಿಲ್ಲ ಕಿಡಿಕಾರಿದರ
ಬೊಮ್ಮಾಯಿಗೆ ಕಾನೂನು ಖಾತೆ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಳ್, ಮಾಧುಸ್ವಾಮಿ ಕಾನೂನು ಪಂಡಿತರು. ಯಡಿಯೂರಪ್ಪ ಸರ್ಕಾರ ಬರಲು ಸದನದಲ್ಲಿ ಹೋರಾಟ ಮಾಡಿದ್ದಾರೆ. ಅವರನ್ನು ಬಿಟ್ಟು ಬೊಮ್ಮಾಯಿಗೆ ಯಾಕೆ ಕಾನೂನು ಖಾತೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.