ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಒಟ್ಟು ಸ್ಥಿರಾಸ್ತಿ 6.11 ಕೋಟಿ ಹಾಗೂ ಚರಾಸ್ತಿ 26.73 ಕೋಟಿ ಸೇರಿದಂತೆ ಒಟ್ಟು 32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಗಾಯತ್ರಿ ಸಿದ್ದೇಶ್ವರ, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಗಾಯತ್ರಿ ಸಿದ್ದೇಶ್ವರ ಕೈಯಲ್ಲಿ 87,949 ನಗದು ಇದೆ. ಬ್ಯಾಂಕಿನಲ್ಲಿ 48.44 ಲಕ್ಷ ಹಣ ಹೊಂದಿದ್ದಾರೆ. ವಿಮಾ ಪಾಲಿಸಿಗಳಲ್ಲಿ 22.34 ಲಕ್ಷ ಹೂಡಿಕೆ ಮಾಡಿದ್ದು, 3.5 ಕೆಜಿ ಚಿನ್ನಾಭರಣ, 5.50 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. 14.70 ಲಕ್ಷ ಮೌಲ್ಯದ 2.04 ಎಕರೆ ಕೃಷಿ ಭೂಮಿ, 5.08 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, 21.50 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಗಾಯತ್ರಿ ಅವರು, 5.89 ಲಕ್ಷ ಸಾಲವನ್ನೂ ಹೊಂದಿದ್ದಾರೆ. ಯಾವುದೇ ವಾಹನ ಹೊಂದಿಲ್ಲ. ಯಾವುದೇ ಅಪರಾಧ ಪ್ರಕರಣ ಇಲ್ಲವೆಂದು ಘೋಷಣೆ ಮಾಡಿದ್ದಾರೆ.



