ಭದ್ರಾವತಿ: ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದ ಭದ್ರಾವತಿಯಲ್ಲಿ ಈ ಬಾರಿ ಶತಾಯ ಕಮಲ ಧ್ವಜ ಹಾರಿಸಿಯೇ ಸಿದ್ಧ ಎಂದಿದ್ದ ಬಿಜೆಪಿಗೆ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಮತ್ತೆ ಸೋಲು ಎದುರಾಗಿದೆ. ಈ ಮೂಲಕ ಭದ್ರಾವತಿಯಲ್ಲಿ ಕಮಲ ಅರಳಿಸುವ ಕನಸು ಕಮರಿದಂತಾಗಿದೆ. ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ಮತ್ತೆ ಅಧಿಕಾರಕ್ಕೆ ಏರಿದೆ.
ಭದ್ರಾವತಿ ನಗರ ಸಭೆಯ 34 ವಾರ್ಡ್‌ಗಳಲ್ಲಿ ಕಾಂಗ್ರೆಸ್ 18, ಜೆಡಿಎಸ್ 11 ಹಾಗೂ ಬಿಜೆಪಿ 4, ಪಕ್ಷೇತರ 1 ಸ್ಥಾನಗಳಿಸಿದ್ದಾರೆ. ಕಾಂಗ್ರೆಸ್ 18ಸ್ಥಾನ ಗೆಲ್ಲುವ ಮೂಲಕ ಬಹುಮತಗಳಿಸಿದೆ. ಈ ಬಾರಿ ಭದ್ರಾವತಿಯಲ್ಲಿ ಬಿಜೆಪಿ ಗೆಲ್ಲಿಸಲು ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಭರ್ಜರಿ ಪ್ರಚಾರ ನಡೆಸಿದ್ದರು. ಕಳೆದ ಬಾರಿ 23 ಸ್ಥಾನಗಳಿಸಿದ್ದ ಜೆಡಿಎಸ್‌ಗೆ ಅಪ್ಪಾಜಿ ಗೌಡ ನಿಧನ ನಂತರ ನಾಯಕತ್ವ ಇಲ್ಲದೇ ಈ ಬಾರಿ 11 ಸ್ಥಾನಗಳಿಗೆ ಪಡೆದಿದೆ.



