ದಾವಣಗೆರೆ: ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದ್ದು, ನಾಲ್ಕು ಕ್ರೆಸ್ಟ್ ಗೇಟ್ ಮೂಲಕ ನದಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ. ನದಿ ಪಾತ್ರದ ಸಾರ್ವಜನಿಕರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೂಚನೆ ನೀಡಿದ್ದಾರೆ.
ಭದ್ರಾ ಜಲಾಶಯ; ಜು.11ರ ನೀರಿನ ಮಟ್ಟ ಎಷ್ಟಿದೆ..?
ಇಂದು ಸಂಜೆಯಿಂದಲೇ ನದಿಗೆ ನೀರು
ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ
ಭದ್ರಾ ಜಲಾಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹರಿದು ಬರುವ ನೀರು ಹೆಚ್ಚಾಗಿದ್ದು, ಜಲಾಶಯವು ಯಾವುದೇ ಸಂದರ್ಭದಲ್ಲಾದರೂ ತುಂಬುವ ಸಂಭವವಿರುವುದರಿಂದ ಜಲಾಶಯದ ಸುರಕ್ಷತೆಗಾಗಿ ಭದ್ರಾ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟುಗಳ ಮೂಲಕ ನೀರನ್ನು ದಿನಾಂಕ 11.7.2025 ರ ಸಂಜೆ4 ಗಂಟೆಯಿಂದ ನದಿಗೆ ಹರಿಯ ಬಿಡಲಾಗುವುದು.
ಸಾರ್ವಜನಿಕರಿಗೆ ಪ್ರವೇಶ ನಿಷೇಧ
ಈ ಹಿನ್ನೆಲೆಯಲ್ಲಿ ನದಿಯ ಪಾತ್ರದಲ್ಲಿ ಸಾರ್ವಜನಿಕರು ಓಡಾಡುವುದು ಹಾಗೂ ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಈ ಮೂಲಕ ಸೂಚಿಸಲಾಗಿದೆ. ಭದ್ರಾ ಜಲಾಶಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇದಿಸಲಾಗಿದೆ.
ದಾವಣಗೆರೆ: ಗಂಡ-ಹೆಂಡ್ತಿ ಜಗಳ; ಪತ್ನಿ ಮೂಗನ್ನೇ ಕಚ್ಚಿ ತಂಡರಿಸಿದ ಪತಿರಾಯ; ದೂರು ದಾಖಲು..!!