ಭದ್ರಾವತಿ: ಭದ್ರಾ ಜಲಾಶಯದ ಪ್ರದೇಶದಲ್ಲಿ ಮಳೆ ಚೇತರಿಕೆ ಕಂಡಿದೆ. ಡ್ಯಾಂಗೆ ಒಳ ಹರಿವು ಸ್ವಲ್ಪ ಏರಿಕೆಯಾಗಿದೆ. ಇಂದು (ಜು.19) ಬೆಳಗ್ಗೆ ವೇಳೆಗೆ 1,518 ಕ್ಯೂಸೆಕ್ ಒಳ ಹರಿವಿದೆ. ಇಂದಿನ ನೀರಿನ ಮಟ್ಟ 141.7ಅಡಿಯಷ್ಟಿದ್ದು, ಕಳೆದ ವರ್ಷ ಇದೇ ದಿನ 182.1 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಡ್ಯಾಂ ನಿಂದ ನಾಲೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು.
ಈ ವರ್ಷ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ನೀರು ಸಂಗ್ರಹ ಕುಸಿದಿದೆ. ಕಳೆದ ವರ್ಷದ ಈ ದಿನಕ್ಕೆ ಹೋಲಿಸಿದ್ದರೆ 41 ಅಡಿಯಷ್ಟು ನೀರು ಕೊರತೆಯಲ್ಲಿದೆ. ಅರ್ಧ ಮಳೆಗಾಲ ಕಳೆದರೂ ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಭದ್ರಾ ಅಚ್ಚುಕಟ್ಟು ಪ್ರದೇಶ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
- ಡ್ಯಾಂ ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 141.7 ಅಡಿ
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 23,803 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳ ಹರಿವು: 1,518 ಕ್ಯೂಸೆಕ್
- ಒಟ್ಟು ಹೊರ ಹರಿವು: 164 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್
- ಎಡದಂಡೆ ನಾಲೆ: 0.00 ಕ್ಯೂಸೆಕ್
- ಕಳೆದ ವರ್ಷ ಈ ದಿನ : 182.1ಅಡಿ



