Connect with us

Dvgsuddi Kannada | online news portal | Kannada news online

ಭದ್ರಾ ಜಲಾಶಯ: ಸೆ.1ರ ನೀರಿನ ಮಟ್ಟ 182.11 ಅಡಿ; 7918 ಕ್ಯೂಸೆಕ್ ಒಳ ಹರಿವು

bhadra dam dvgsuddi

ಪ್ರಮುಖ ಸುದ್ದಿ

ಭದ್ರಾ ಜಲಾಶಯ: ಸೆ.1ರ ನೀರಿನ ಮಟ್ಟ 182.11 ಅಡಿ; 7918 ಕ್ಯೂಸೆಕ್ ಒಳ ಹರಿವು

ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಇಂದು (ಸೆ.1) 7,918 ಕ್ಯೂಸೆಕ್ ಒಳ ಹರಿವಿದೆ. 4193 ಕ್ಯೂಸೆಕ್ ಹೊರ ಹರಿವಿದೆ. ಇಂದಿನ ನೀರಿನ ಮಟ್ಟ 182.11 ಅಡಿ ಇದೆ. ಎಡ ದಂಡೆ ನಾಲೆಗೆ 380 ಕ್ಯೂಸೆಕ್ ಮತ್ತು ಬಲ ದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 120 ದಿನ ನೀರು ಹರಿಸಲು ಕಾಡಾ ಸಭೆ ನಿರ್ಧಾರ ಕೈಗೊಳ್ಳಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ನಾಲೆಗೆ ನೀರರಿನ ಮೂಲಕ ಈಗಾಗಲೇ ಭತ್ತ ನಾಟಿ ಮುಗಿದಿದೆ. ಈ ಬಾರಿ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮವಾಗಿದ್ದರಿಂದ ಒಂದೇ ತಿಂಗಳಲ್ಲಿ ಡ್ಯಾಂ ತುಂಬಿದೆ.

ಕಳೆದ ವರ್ಷ ಇದೇ ದಿನ (ಸೆ.1) 606 ಕ್ಯೂಸೆಕ್ ಒಳ‌‌ಹರಿವು ಇತ್ತು. 163.11 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂ ಭರ್ತಿಯಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ಹಾಯ್ದು ಹೋಗುತ್ತಿದ್ದು, ಈ ಭಾಗದಲ್ಲಿಯೂ ಸಹ ಭತ್ತ ನಾಟಿ ಮುಗಿದಿದೆ.

ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಸೆ.1) ನೀರಿನ ಮಟ್ಟ 182.11 ಅಡಿಯಷ್ಟಿದೆ. ಒಳ ಹರಿವು 7918 ಕ್ಯೂಸೆಕ್‌ ನಷ್ಟಿದೆ.

  • ಭದ್ರಾ ಜಲಾಶಯ ನೀರಿನ ವಿವರ
  • ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 67.701 ಟಿಎಂಸಿ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 182.11ಅಡಿ
  • ಒಳ ಹರಿವು : 7918 ಕ್ಯೂಸೆಕ್
  • ಹೊರ ಹರಿವು : 4193 ಕ್ಯೂಸೆಕ್
  • ಎಡ ದಂಡೆ : 308 ಕ್ಯೂಸೆಕ್
  • ಬಲ ದಂಡೆ : 2650 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 163.11 ಅಡಿ
  • ಇದೇ ದಿನ ಕಳೆದ ವರ್ಷದ ಒಳಹರಿವು: 606 ಕ್ಯೂಸೆಕ್

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • rain22 rain22

    ಪ್ರಮುಖ ಸುದ್ದಿ

    ಮುಂದಿನ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಮುನ್ಸೂಚನೆ

    By

    ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain)  ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 28 ಜೂನ್ 2025

    By

    ಈ ರಾಶಿಯವರ ಉದ್ಯೋಗ ವ್ಯಾಪಾರ ವಹಿವಾಟಗಳಲ್ಲಿ ಭಾರಿ ನಷ್ಟ, ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ, ಶನಿವಾರದ ರಾಶಿ ಭವಿಷ್ಯ...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 26 ಜೂನ್ 2025

    By

    ಈ ರಾಶಿಯವರಿಗೆ ನಂಬಿದವರು ದೂರ ಆಗುತ್ತಾರೆ, ಈ ರಾಶಿಯವರ ಮದುವೆ ವಿಳಂಬ ಎಂಬ ಏಕೆ? ಗುರುವಾರದ ರಾಶಿ ಭವಿಷ್ಯ 26 ಜೂನ್...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025

    By

    ಈ ರಾಶಿಯ ವಿಚ್ಛೇದನ ಪಡೆದ ಪತಿ ಪತ್ನಿ ಮತ್ತೆ ಸೇರೋ ಬಯಕೆ, ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು, ಮಂಗಳವಾರದ...

To Top