ದಾವಣಗೆರೆ: ಭದ್ರಾ ಡ್ಯಾಂನಿಂದ ಅಚ್ಚುಕಟ್ಟಿನ ಎಡ ಮತ್ತು ಬಲ ನಾಲೆಗಳು, ಅನವೇರಿ ಶಾಖಾನಾಲೆ, ದಾವಣಗೆರೆ ಶಾಖಾನಾಲೆ, ಮಲೆಬೆನ್ನೂರು ಶಾಖಾನಾಲೆ, ಹರಿಹರಶಾ ಖಾನಾಲೆ ಮತ್ತು ಗೋಂದಿ ನಾಲೆಗಳಿಗೆ 2023-24ನೇ ಸಾಲಿನ ಮುಂಗಾರು ಬೆಳೆಗಳಿಗೆ ಆ.10ರಿಂದ 100 ದಿನಗಳ ಕಾಲ ನೀರು ಹರಿಸಲು ಭದ್ರಾ ಕಾಡಾ ಸಮಿತಿ ತೀಮಾನ ಕೈಗೊಂಡಿದೆ.
ಮುಂಗಾರು ಬೆಳೆಗಳಿಗೆ ಭದ್ರಾ ಡ್ಯಾಂನಿಂದ
ಆ.10ರ ಮಧ್ಯ ರಾತ್ರಿಯಿಂದಲೇ ನೀರು ಹರಿಯಲಿದೆ. ಭದ್ರಾ ಡ್ಯಾಂನ ಮುಖ್ಯ ನಾಲೆ, ಶಾಖಾನಾಲಾ, ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಆಂತರಿಕ
ಸರದಿಯನ್ನು ಕಾರ್ಯಪಾಲಕ ಅಭಿಯಂತರರು ನಿರ್ಧರಿಸಲಿದ್ದಾರೆ. ಈ ಬಾರಿ 18 ಅಡಿ ನೀರಿನ ಕೊರತೆ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಇಂದಿನಿಂದ ಎಡದಂಡ ನಾಲೆಯಲ್ಲಿ 380 ಹಾಗೂ ಬಲದಂಡೆ ನಾಲೆಯಲ್ಲಿ 2650 ಕ್ಯೂಸೆಕ್ ನೀರು ಸತತ 100 ದಿನಗಳ ಅವಧಿಗೆ ನಾಲೆಗೆ ಹರಿಸಲು ಕ್ರಮ ಕೈಗೊಂಡಿದೆ. ಡ್ಯಾಂನಲ್ಲಿ ಬುಧವಾರದ ಮಾಹಿತಿಯನ್ವಯ
166.5 ಅಡಿ ನೀರು ಸಂಗ್ರಹವಿದ್ದು, 4118 ಕ್ಯೂಸೆಕ್ ಒಳ ಹರಿವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿ, ಭಾರೀ ಪ್ರಮಾಣದ ನೀರು
ನದಿಗೆ ಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 18 ಅಡಿಯಷ್ಟು ನೀರಿನ ಕೊರತೆ ಇದೆ.
ಕರ್ನಾಟಕ ನೀರಾವರಿ ಕಾಯ್ದೆ 1965ರನ್ವಯ
ಬೆಳೆ ಮಾದರಿ ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳ ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತಹೆಚ್ಚು ನೀರು ಬಳಸುವವರು,
ಅನಧಿಕೃತ ನೀರಾವರಿ ಬೆಳೆಗಾರರ ವಿರುದ್ಧ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಕಾಡಾ ಅಧೀಕ್ಷಕ ಅಭಿಯಂತರರು, ಸದಸ್ಯ ಕಾರ್ಯದರ್ಶಿ ಎನ್. ಸುಜಾತಾ ಎಚ್ಚರಿಸಿದ್ದಾರೆ.
ಡ್ಯಾಂನ ಹಾಲಿ ನೀರಿನ ಪ್ರಮಾಣ ಗಣನೆಗೆ ತೆಗೆದುಕೊಂಡು, ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ, ಬೆಳೆಗಳಿಗೆ ಮಾತ್ರ ನೀರೊದಗಿಸಲಾಗುವುದು. ಪ್ರಕಟಿತ ಬೆಳೆಗಳ ಬೆಳೆಯದೇ, ಬೇರೆ ಬೇರೆ ಬೆಳೆಯಬೆಳೆದು, ಉಲ್ಲಂಘಿಸಿ, ನಷ್ಟ ಉಂಟಾದರೆ ಅದಕ್ಕೆಸಂಬಂಧಿಸಿದ ರೈತರೇ ಹೊಣೆಗಾರರಾಗುತ್ತಾರೆ. ಯಾವುದೇ ಕಾರಣಕ್ಕೂ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿಯಾಗದು, ರೈತ ಬಾಂಧವರು ನೀರಿನ ಸದ್ಬಳಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೂಚಿತ ಬೆಳೆಗಳನ್ನು ಬೆಳೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ 1,07,104 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲು ಸಾಧ್ಯ ಎಂದು ಹೇಳಿದ್ದಾರೆ.ಪ್ರಕಟಿತ ಬೆಳೆಗಲಷ್ಟೇ ಬೆಳೆಯಿರಿ: ಒಂದು ವೇಳೆಪ್ರಕಟಿತ ಬೆಳೆಗಳಿಗೆ
ಬದಲಾಗಿ ಹೆಚ್ಚು ನೀರುಣ್ಣುವ ಭತ್ತ ಹಾಗೂ ಕಬ್ಬು ಬೆಳೆದರೆ ಪ್ರಕಟಿತ ಬೆಳೆಗಳಿಗೆ ಮತ್ತು ಪ್ರಕಟಿತ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣಕ್ಕೆಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಅನುಸೂಚಿತ ಬೆಳೆಗಳ ನಿಗದಿತ ವಿಸ್ತೀರ್ಣಕ್ಕೆ ಮಾತ್ರ ಬೆಳೆದು, ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.



