ಬೆಂಗಳೂರು; ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (BESCOM) ಅಪ್ರೆಂಟಿಸ್ ಹುದ್ದೆಗೆ ಪದವಿ ಮತ್ತು ತಂತ್ರಜ್ಞ ಡಿಪ್ಲೊಮಾ ಪೂರೈಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬೆಸ್ಕಾ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು 400 ಹುದ್ದೆ ಭರ್ತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 9008 ರೂ. ಸ್ಟೈಫಂಡ್ ಸಿಗಲಿದೆ.ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಯನ್ನು ಅಪ್ರೆಂಟಿಸ್‌ಶಿಪ್ ಕಾಯಿದೆ 1961 ರ ಪ್ರಕಾರ 1 ವರ್ಷಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರವನ್ನು ಪಡೆದಿರಬೇಕಾಗುತ್ತದೆ. ಒಟ್ಟಾಗಿ 400 ಹುದ್ದೆಗಳಿಗೆ ಭರ್ತಿ ನಡೆಯಲಿದೆ.
ಬೆಸ್ಕಾಂ ನೇಮಕಾತಿ 2023 ರ ಅಧಿಕೃತ ಅಧಿಸೂಚನೆಯ ಪ್ರಕಾರ ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್‌ಗಳ (ಪದವಿ ಮತ್ತು ತಂತ್ರಜ್ಞ ಡಿಪ್ಲೊಮಾ) ಹುದ್ದೆಗೆ 400 ಖಾಲಿ ಹುದ್ದೆಗಳನ್ನು ಬೆಸ್ಕಾ ಆರಂಭಿಸಿದೆ. 18 ವರ್ಷ ವಯೋಮಿತಿಯಾಗಿದೆ.
- ಪದವಿ ಹುದ್ದೆ ವಿವರ
- ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್: 143
- ಎಲೆಕ್ಟ್ರಾನಿಕ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್: 116
- ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್: 36
- ಇನ್ಫಾರ್ಮೆಷನ್ ಸೈನ್ಸ್ ಆಂಡ್ ಇಂಜಿನಿಯರಿಂಗ್: 20
- ಸಿವಿಲ್ ಇಂಜಿನಿಯರಿಂಗ್: 5
- ಇನ್ಸ್ಟ್ರುಮೆಂಷನ್ ಟೆಕ್ನಾಲಜಿ ಇಂಜಿನಿಯರಿಂಗ್: 5
- ಡಿಪ್ಲೋಮಾ ವಿವರ
- ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 55
- ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಇಂಜಿನಿಯರಿಂಗ್: 10
- ಕಂಪ್ಯೂಟರ್ ಸೈನ್ಸ್ ಆಂಡ್ ಇಜಿನಿಯರಿಂಗ್: 10
- ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ- ಅಭ್ಯರ್ಥಿಗೆ ಮಾಸಿಕ 9008 ರೂಪಾಯಿ ಸ್ಟೈಫಂಡ್ ಸಿಗುತ್ತದೆ.
- ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳಿಗೆ- ಅಭ್ಯರ್ಥಿಗೆ ಮಾಸಿಕ 8000 ರೂಪಾಯಿ ಸ್ಟೈಫಂಡ್ ಸಿಗುತ್ತದೆ.
ಅಪ್ರೆಂಟಿಸ್‌ಶಿಪ್ ಆಕ್ಟ್ 1961 ರ ಪ್ರಕಾರ ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು 01 ವರ್ಷಗಳ ಅವಧಿಗೆ ಇರುತ್ತದೆ. ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಬಿಇ/ ಬಿಟೆಕ್ ಅನ್ನು ಪಡೆದಿರಬೇಕು. ಅಭ್ಯರ್ಥಿಯು ರಾಜ್ಯ ಸರ್ಕಾರ/ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜು/ ಸಂಸ್ಥೆಯಿಂದ 3 3-ವರ್ಷದ ಡಿಪ್ಲೊಮಾವನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?; ಬೆಸ್ಕಾಂ ನೇಮಕಾತಿ 2023 ರ ಅಧಿಕೃತ ಅಧಿಸೂಚನನೆಯಂತೆ ಅರ್ಹ ಅಭ್ಯರ್ಥಿಗಳು https://nats.education.gov.in/ ವೆಬ್ ಸೈಟ್ ಗೆ ಹೋಗಿ ಸ್ಟೂಡೆಂಟ್ ರಿಜಿಸ್ಟರ್ ಮಾಡಿಕೊಂಡ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.



