ಡಿವಿಜಿ ಸುದ್ದಿ, ಬೆಂಗಳೂರು: ಈಬಾರಿಯ ಐಪಿಎಲ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 25 ಕೇಸ್ ದಾಖಲಿಸಿದ್ದು 45 ಆರೋಪಿಗಳನ್ನು ಬಂಧಿಸಿದ್ದಾರೆ. 1.45 ಕೋಟಿ ನಗದು ಹಣ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹೆಸರಿನಲ್ಲಿ ಆನ್ಲೈನ್ ವೇದಿಕೆಗಳಲ್ಲಿ ಸಹ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಬೆಟ್ಟಿಂಗ್ ಆಫ್ಗಳ ಮೇಲೂ ನಿಗಾ ವಹಿಸಲಾಗಿದೆ. ಬೆಟ್ಟಿಂಗ್ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ ಎಂದರು.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಹಿನ್ನೆಲೆ ಆರ್.ಟಿ. ನಗರ ನಿವಾಸಿ ಕಿರಣ್ ಕುಮಾರ್ ಎಂಬಾತನನ್ನು ಬಂಧಿಸಿದ್ದು, ಆತನಿಂದ 15 ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಆರ್.ಟಿ ನಗರದ ಗಿಡ್ಡಪ್ಪ ಬ್ಲಾಕ್ನಲ್ಲಿ ತಂಗಿದ್ದ ಕಿರಣ್, ಆನ್ಲೈನ್ ಆಪ್ಗಳ ಮೂಲಕ ಬೆಟ್ಟಿಂಗ್ ಮಾಹಿತಿ ಪಡೆದು ಮೊಬೈಲ್ ಹಾಗೂ ಮೊಬೈಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಜೂಜು ಆಡಿಸುತತ್ತಿದ್ದರು.