ಬೆಂಗಳೂರು: ಬೆಂಗಳೂರಲ್ಲಿ ಹೈಟೆಕ್ ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರು ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ವಿಐಪಿ, ಅಧಿಕಾರಿ ವರ್ಗ ಕಾಂಟ್ರಾಕ್ಟರ್ ಗಳನ್ನು ಈಕೆ ಹನಿಟ್ರ್ಯಾಪ್ಗೆ ಕೆಡವುತ್ತಿದ್ದಳು.
ಹನಿಟ್ರ್ಯಾಪ್ ನಿಂದ ವಂಚನೆಗೊಳ್ಳಗಾದ ಕಂಟ್ರಾಕ್ಟರ್ ಒಬ್ಬರು ಈ ಸಂಬಂಧ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತಳನ್ನು ವಿದ್ಯಾ ಎಂದು ಗುರುತಿಸಲಾಗಿದ್ದು, ಸಿವಿಲ್ ಕಾಂಟ್ರಾಕ್ಟರ್ ಲೋಹಿತ್ ಎಂಬುವವರು ಈಕೆ ವಿರುದ್ಧ ದೂರು ನೀಡಿದ್ದರು. ಫೋಟೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ.
ಹರ್ಬಲ್ ಲೈಫ್ ಪ್ರಾಡಕ್ಟ್ ಹೆಸರಿನಲ್ಲಿ ಸಿವಿಲ್ ಕಂಟ್ರಾಕ್ಟರ್ ಲೋಹಿತ್ ಅವರನ್ನು ಇಬ್ಬರು ಹುಡುಗರು ಭೇಟಿಯಾಗಿದ್ದರು. ಈ ವೇಳೆ ತಮ್ಮ ಉತ್ಪನ್ನದ ಕುರಿತು ತಿಳಿಸಿದ ಅವರು ಈ ಪ್ರೋಡಕ್ಟ್ ಬೇಕಿದ್ದರೆ, ಈ ನಂಬರ್ಗೆ ಕರೆ ಮಾಡಿ ಎಂದು ವಿದ್ಯಾ ನಂಬರ್ ಕೊಟ್ಟಿದ್ದರು. ಈ ವೇಳೆ ಕರೆ ಮಾಡಿದಾಗ, ಆರೋಪಿತೆ ವಿದ್ಯಾ ಜೊತೆ ಹರ್ಬಲ್ ಲೈಫ್ ಪ್ರೊಡಕ್ಟ್ ಖರೀದಿ ವಿಚಾರವಾಗಿ ಲೋಹಿತ್ಗೆ ಸ್ನೇಹ ಬೆಳೆದಿದೆ. ಇದಾದ ಬಳಿಕ ಇಬ್ಬರ ನಡುವಿನ ಸಂಭಾಷಣೆ ಸ್ನೇಹಕ್ಕೆ ತಿರುಗಿದೆ. ಪರಿಚಯದ ಸಲಿಗೆ ಮೇರೆಗೆ ಲೋಹಿತ್ ಆಕೆಯನ್ನು ರೆಸಾರ್ಟ್ ವೊಂದರಲ್ಲಿ ಪಾರ್ಟಿಗೆ ಕರೆದೊಯದ್ದಿದ್ದಾರೆ. ಇದಾದ ಬಳಿಕ ವಿದ್ಯಾ ತಾವಿಬ್ಬರು ರೆಸಾರ್ಟ್ನಲ್ಲಿ ಜೊತೆಗಿದ್ದ ಪೋಟೋವನ್ನು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ರೆಸಾರ್ಟ್ನಲ್ಲಿ ಜೊತೆಗಿದ್ದ ಪೋಟೊವನ್ನು ತೋರಿಸಿ 1 ಕೋಟಿ ರೂ ಹಣ ನೀಡುವಂತೆ ಗೆಳೆಯನೊಂದಿಗೆ ಬಂದಿ ವಿದ್ಯಾ ಲೋಹಿತ್ಗೆ ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಪೆನ್ಡ್ರೈವ್ ಅನ್ನು ನೀಡಿದ್ದಾರೆ. ಅದಲರಲ್ಲಿ ಕೂಡ ಕಾಂಟ್ರಾಕ್ಟರ್ ಲೋಹಿತ್ ಹಾಗೂ ವಿದ್ಯಾ ಜೊತೆಗಿದ್ದ ಫೋಟೊಗಳಿದ್ದವು. ಇಷ್ಟಕ್ಕೂ ಲೋಹಿತ್ ಜಗ್ಗದಿದ್ದಾಗ ವಿದ್ಯಾ ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಇದರಿಂದ ಬೇಸತ್ತ ಲೋಹಿತ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇನ್ನು ಆರೋಪಿತೆ ವಿದ್ಯಾ ಇದೇ ರೀತಿ ಅನೇಕರಿಗೆ ಹನಿಟ್ರ್ಯಾಪ್ ಮಾಡಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈಕೆ ತಾನು ತಮಿಳುನಾಡು ಕಾಂಗ್ರೆಸ್ ಸದಸ್ಯೆ ಎಂದು ಹೇಳಿಕೊಂಡು ವಂಚಿಸಿರುವುದು ತನಿಖೆ ವೇಳೆ ಬಯಲಾಗಿದೆ.



