ಬೆಂಗಳೂರು: ಯಾವುದೆ ಸಾಲ ಪಡೆಯಲು ಆಸ್ತಿ ಅಡಮಾನ ಇಡಬೇಕಾಗುತ್ತದೆ. ಅದಕ್ಕಾಗಿ ಬಿಎಂಟಿಸಿ ಶಾಂತಿನಗರ ಕಟ್ಟಡವನ್ನು ಅಡಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಡಿಸೆಂಬರ್ ತಿಂಗಳ ಸಂಬಳನ್ನು ಎರಡು ದಿನದಲ್ಲಿ ಹಾಕುತ್ತವೆ. ಇನ್ನು ಜನವರಿ ತಿಂಗಳ15 ದಿನದ ಸಂಬಳ ಶೀಘ್ರವಾಗಿ ಹಾಕುತ್ತೇವೆ. ಇಲಾಖೆಯ ಆದಾಯ ಇಂಧನ ಮತ್ತು ಸಂಬಳಕ್ಕೆ ಸರಿಯಾಗುತ್ತಿದೆ. ಸಂಬಳಕ್ಕೆ ಹಣಕಾಸು ಇಲಾಖೆ ಒಪ್ಪಿಕೊಂಡಿದೆ. ಎರಡು ದಿನದಲ್ಲಿ ಸರಿಯಾಗುತ್ತದೆ. ಯಾವುದೇ ಅಡ್ಡಿ ಆತಂಕವಿಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಸಾರಿಗೆ ನೌಕರರ ಪ್ರತಿಭಟನೆ ಮಾಡುವ ಖಚಿತ ಮಾಹಿತಿಯಿಲ್ಲ. ನನ್ನನ್ನು ಯಾರು ಭೇಟಿ ಮಾಡಿಲ್ಲ ಮನವಿ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ನೋಡಿಯಷ್ಟೆ ನನಗೆ ಮಾಹಿತಿ ತಿಳಿದಿದೆ. ನಾನು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಹಿಂದೆ ಪ್ರತಿಭಟನೆ ಮಾಡಿದಾಗ 9 ಬೇಡಿಕೆ ಇಟ್ಟಿದ್ದರು. ಅದರಲ್ಲಿ ನಾಲ್ಕು ಬೇಡಿಕೆ ಇಡೇರಿಸಿದ್ದೇವೆ. ಐದು ಸಭೆ ನಡೆಸಿದ್ದೇವೆ ಅದು ಅವರಿಗೂ ಗೊತ್ತು. ಇನ್ನು 15 ದಿನದಲ್ಲಿ ನೌಕರರ ಜೊತೆ ಆರನೇ ಸಭೆ ನಡೆಸಿ ವೇತನ ಪರಿಷ್ಕರಣೆ ಬಗ್ಗೆಯು ಮಾತನಾಡುತ್ತೇನೆ ಎಂದರು.



