Connect with us

Dvgsuddi Kannada | online news portal | Kannada news online

ಶನಿವಾರ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶನಿವಾರ ರಾಶಿ ಭವಿಷ್ಯ

  • ಶನಿವಾರ- ರಾಶಿ ಭವಿಷ್ಯ ಜನವರಿ-9,2021
  • ಸಫಲಾ ಏಕಾದಶಿ
    ಸೂರ್ಯೋದಯ: 06:43 AM, ಸೂರ್ಯಸ್ತ: 06:07 PM
  • ಶಾರ್ವರೀ ನಾಮ ಸಂವತ್ಸರ ದಕ್ಷಿಣಾಯಣ
    ಮಾರ್ಗಶಿರ ಮಾಸ
    ಕೃಷ್ಣ ಪಕ್ಷ
    ಹೇಮಂತ ಋತು
  • ತಿಥಿ: ಏಕಾದಶೀ ( 19:17 )
    ನಕ್ಷತ್ರ: ವಿಶಾಖ ( 12:32 )
    ಯೋಗ: ಶೂಲ ( 15:00 )
    ಕರಣ: ಬವ ( 08:29 ) ,
    ಬಾಲವ ( 19:17 )
  • ರಾಹು ಕಾಲ: 09:00 – 10:30
    ಯಮಗಂಡ: 01:30 – 03:00

ಜಾತಕ ಆಧಾರದ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ:
ಈ ರಾಶಿಯವರಿಗೆ ವಿಶೇಷ ಲಾಭದಾಯಕವಾಗಿದೆ.
ಈ ರಾಶಿಗೆ ಒಂಬತ್ತರ ರವಿ-ಬುಧ ಬಟ್ಟೆ, ದಿನಸಿ, ಹಣ್ಣು ಹಂಪಲ ತರಕಾರಿ, ಸ್ಟೇಷನರಿ ವ್ಯಾಪಾರಸ್ಥರಿಗೆ ಉತ್ತಮ ಹಣಕಾಸಿನ ವ್ಯಾಪಾರ ವಹಿವಾಟು ನಡೆಯುವುದು. ಈ ರಾಶಿ ಬಲಕ್ಕೆ ಹತ್ತರ ಗುರು-ಶನಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಉತ್ತಮ ಬೇಡಿಕೆ ಕಾಣಲಿದೆ. ರಾಜಕಾರಣಿಗಳಿಗೆ , ಅಧಿಕಾರ ವರ್ಗದವರಿಗೆ ಬೃಹತ್ ಉದ್ಯಮ ದಾರರಿಗೆ ರಾಶ್ಯಾಧಿಪತಿ ಕುಜನು ಮೇಷದಲ್ಲಿ ಇದ್ದುಕೊಂಡು ದೊಡ್ಡ ಸಾಧನೆಯ ಕೆಲಸವನ್ನು ಕೈಗೂಡಿಸಿಕೊಡುತ್ತಾರೆ. ನಿಮ್ಮಲ್ಲಿ ಸದೃಢವಾದ ಸಂಕಲ್ಪ ದಿಂದ ಉದ್ಯೋಗ ಪಡೆಯುವಿರಿ. ದೇವದರ್ಶನ ಭಾಗ್ಯ ನೆರವೇರಲಿದೆ. ದಶಮ ಸ್ಥಾನದ ಗುರು ಶನಿ ಸ್ವಾಮಿಯ ಭಾಗ್ಯದಿಂದ ಮನೆಯಲ್ಲಿ ಶುಭಮಂಗಲ ಕಾರ್ಯಗಳು ಜರಗುವುದು. ಈಗ ತಾನೆ ಮಕರ ರಾಶಿಗೆ ಗುರು ಪ್ರವೇಶ ದಿಂದ ನಿಮಗೆ ಸಂತಾನಪ್ರಾಪ್ತಿ ಸಂಭವ. ರಿಯಲ್ ಎಸ್ಟೇಟ್ ಅವರಿಗೆ ಹಣ ಗಳಿಸಲು ಉತ್ತಮ ಅವಕಾಶ ಸಿಗಲಿದೆ. ಗುರು ಬಲದಿಂದ ರಾಜಕೀಯ ಫಲಿತಾಂಶ ನಿಮ್ಮಂತ ಆಗಲಿದೆ. ದೇವರಲ್ಲಿ ಅನನ್ಯ ಪ್ರಾರ್ಥನೆಯಿಂದ ಪ್ರೇಮವಿವಾಹ ಸಂಭವ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ವೃಷಭ:
ಈ ರಾಶಿಯಲ್ಲಿ ರಾಹು ಇದ್ದು, ನೀವು ಬಯಸಿದ ಫಲಗಳನ್ನು ಕೊಡುತ್ತಾನೆ. ಉದ್ಯೋಗ ಪಡೆಯುವಲ್ಲಿ ಯಶಸ್ಸು. ಸಂದರ್ಶನದ ಫಲಿತಾಂಶ ನಿಮ್ಮ ಕೈಸೇರಲಿದೆ. ‘ಪರೋಪಕಾರಂ ಇದಂ ಶರೀರಂ’ ಎಂಬ ನಾಣ್ನುಡಿಯಂತೆ ಸಂಬಂಧಿಕರ ಕಷ್ಟಗಳನ್ನು ನೀಗಿಸುವಿರಿ. ಕುಟುಂಬದ ಸದಸ್ಯರ ಜೊತೆ ದೇವರಿಗೆ ಕೊಟ್ಟ ವಚನ-ಹರಕೆ ತೀರಿಸಿ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಸಮಯ ಚನ್ನಾಗಿದೆ, ಬೇರೆ ಉದ್ಯೋಗಾವಕಾಶದ ಭಾಗ್ಯ ಸಿಗುವುದು.ಜಾಣ್ಮೆಯಿಂದ ಸಂದರ್ಶನ ಎದುರಿಸಿ. ಮದುವೆಗೆ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಎರಡನೇ ವಿವಾಹ ವಿಚಾರವುಳ್ಳವರಿಗೆ ಸಿಹಿಸುದ್ದಿ ಸಿಗಲಿದೆ. ಗಂಡು ಸಂತಾನ ಕೊರಗು ಸದಾ ಕಾಡುವುದು.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಮಿಥುನ:
ಈ ರಾಶಿಗೆ ಸಪ್ತಮದಲ್ಲಿರುವ ಸೂರ್ಯನು ಅಂಗರಕ್ಷಕ ನಾಗುವನು. ಈ ರಾಶಿಗೆ ಸೂರ್ಯ-ಬುಧ ಸಪ್ತಮ ಸ್ಥಾನದಲ್ಲಿದ್ದು , ಹೊಸ ಉದ್ಯಮ ಪ್ರಾರಂಭ ವಿಚಾರ ಒಳ್ಳೆಯದು. ಆಕಸ್ಮಿಕ ಮದುವೆ ಚರ್ಚೆ ನಡೆಯಲಿದೆ. ರಾಜಕಾರಣಿಗಳಿಗೆ ಉನ್ನತ ಪದವಿ ಸಿಗಲಿದೆ. ಬಹುದಿನದ ಪ್ರೀತಿ-ಪ್ರೇಮದ ವಿಚಾರ ಇಂದು ಮದುವೆ ಚರ್ಚೆ ಸಂಭವ. ನವದಂಪತಿಗಳಿಗೆ ಸಂತಾನ ಸುದ್ದಿ ಸಿಗಲಿದೆ, ವಿಶ್ರಾಂತಿ ಅವಶ್ಯಕ. ಬಹು ದಿನದ ಕನಸು ಈಡೇರಲಿದೆ. ಮನೆ ಕಟ್ಟುವುದಕ್ಕಾಗಿ ಸಾಲ ಸಿಗುವ ಸಂಭವ. ಜಮೀನು ವಿಚಾರಕ್ಕಾಗಿ ದಾಯಾದಿಗಳಿಂದ ಕಾದಾಟ. ಸಾಲ ವಸೂಲಾತಿಗಾಗಿ ಜಗಳ ಸಂಭವ. ವಿರೋಧಿಗಳ ವೈಷಮ್ಯದಿಂದ ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಕಟಕ ರಾಶಿ:
ವರ್ಗಾವಣೆ ಬಯಸಿದವರಿಗೆ ಸಿಗುವ ಭಾಗ್ಯ. ಉದ್ಯೋಗಸ್ಥರಿಗೆ ಉದ್ಯೋಗದ ಸ್ಥಾನ ಬದಲಾವಣೆ ಚಿಂತನೆ ಮಾಡಬೇಡಿ. ಸರ್ಕಾರಿ ನೌಕರರು ನಿವೃತ್ತಿಯ ಬಗ್ಗೆ ಚಿಂತನೆ ಮಾಡುವ ಸಂಭವ.
ನಿಮ್ಮ ಕೆಲಸ ಮಾಡಿಕೊಡಲು ದಲ್ಲಾಳಿಗಳಿಗೆ ನಂಬಬೇಡಿ. ನಿಮ್ಮ ಆರೋಗ್ಯ -ಅದೃಷ್ಟ ಎಲ್ಲವೂ ಚೆನ್ನಾಗಿದೆ. ಬಟ್ಟೆ, ಬೇಕ್ರಿ, ಸ್ವೀಟ್ ಮಾರ್ಟ್, ಸಲೂನ್, ಬ್ಯೂಟಿ ಪಾರ್ಲರ್ ವ್ಯಾಪಾರದಲ್ಲಿ ಉತ್ತಮ ಧನಲಾಭ, ತುಂಬಾ ಕಾಂಪಿಟಿಶನ್ ಇದೆ. ಶಿಕ್ಷಕ ವೃಂದದ ಮಕ್ಕಳಿಗೆ ಕಂಕಣ ಬಲ. ಪ್ರೇಮಿಗಳಿಗೆ ಮದುವೆಯ ಒತ್ತಡ ಬೀಳಲಿದೆ. ಪ್ರೇಮಿಗಳಿಬ್ಬರೂ ಒಂದಾಗುವ ಚಿಂತನೆ ಮಾಡುವಿರಿ. ಅಮೂಲ್ಯ ಉಡುಗೊರೆ ನೀಡುವಿರಿ. ಆಸ್ತಿಯ ಲೋಪ ದೋಷದ ಬಗ್ಗೆ ಪ್ರಾರಂಭದಲ್ಲಿಯೇ ಬಗೆಹರಿಸಿಕೊಳ್ಳಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

 

ಸಿಂಹ ರಾಶಿ :
ಈ ರಾಶಿಗೆ ಷಷ್ಟಮ ಶನಿ ಸ್ವಾಮಿ ಷಷ್ಟಮ ಗುರು ಇರುವುದರಿಂದ ಹಳೆಯ ಸಾಲ ವಸೂಲಾತಿ ಆಗುವುದು. ನಿಂತುಹೋಗಿರುವ ಕಟ್ಟಡ ಮರುಚಾಲನೆ. ಜಮೀನಿನಲ್ಲಿ ಹೊಸ ಬೋರ್ವೆಲ್ ಕೊರೆಯುವ ಸಾಧ್ಯತೆ. ನಿವೇಶನ ವಾಸ್ತು ಪ್ರಕಾರ ಬದಲಾವಣೆ ಚಿಂತನೆ. ನಿಂತುಹೋಗಿದ್ದ ಮದುವೆ ಮಾತುಕತೆ ಮರು ಚರ್ಚೆ. ಎಲ್ಲಾ ತರಹದ ವ್ಯಾಪಾರಸ್ಥರಿಗೆ ಬೇಕಾದ್ದನ್ನೆಲ್ಲ ಪಡೆಯಿರಿ. ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರ ಇರಲಿ. ಮನಸ್ತಾಪವಾಗಿರುವ ದಾಯಾದಿಗಳು ನಿಮ್ಮ ಮಾತಿಗೆ ಮಾನ್ಯತೆ ಕೊಡಲಿದ್ದಾರೆ. ಉದ್ಯೋಗ ಪ್ರಾರಂಭ ಮಾಡಲು ಸೂಕ್ತ ಸಮಯ. ಕಾರ್ ವಾಷಿಂಗ್ ಉದ್ದಿಮೆದಾರರಿಗೆ ವ್ಯಾಪಾರದಲ್ಲಿ ಚೇತರಿಕೆ. ಹೋಟೆಲ್ ನಡೆಸುವವರಿಗೆ ಧನಲಾಭ. ಹೊಸ ಹೋಟೆಲ್ ಪ್ರಾರಂಭ ಮಾಡುವ ಚಿಂತನೆ. ಕೃಷಿಕರು ಶೇಕರಣೆ ಮಾಡಿರುವ ಹಳೆಯ ದಾಸ್ತಾನು ಗಳಿಗೆ ಉತ್ತಮ ಬೆಲೆ ಸಿಗಲಿದೆ. ಕಮರ್ಷಿಯಲ್ ಮೈಂಡ್ ಸ್ನೇಹಿತರಿಗೆ ಬೆಲೆ ನೀಡಬೇಡಿ. ಸಂಗಾತಿಯು ಹೂಗುಚ್ಛ ನೀಡಿ ಸಂತೋಷಪಡಿಸುವುದು.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

 

ಕನ್ಯಾ ರಾಶಿ:
ಈ ರಾಶಿಯವರಿಗೆ ಪಂಚಮ ಗುರುವು ಒಳ್ಳೆಯದಕ್ಕೆ ಸಹಕಾರ ನೀಡಿದರೂ ಶನಿ ಸ್ವಾಮಿನಿಂದ ಮದುವೆ, ಉದ್ಯೋಗ, ಉದ್ಯಮ, ವ್ಯಾಪಾರ ವಿಳಂಬ ಮಾಡುತ್ತಾನೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಸೂಕ್ತ ಕೆಲಸಗಳು ಪಡೆಯುವುದರಲ್ಲಿ ವಿಫಲರಾಗಿರುತ್ತೀರಿ ಹಾಗೂ ಹಣಕಾಸಿನ ತೊಂದರೆ ಅನುಭವಿಸುವಿರಿ.ಧ್ಯೇಯ, ಮನಸ್ಸಿನ ಶಾಂತಿ, ದೇವರಲ್ಲಿ ಅಚಲವಾದ ಭಕ್ತಿ, ವಿಶ್ವಾಸ ಇದ್ದಲ್ಲಿ ನೀವು ಸರಕಾರದ ಉನ್ನತ ಪದವಿ ಗಳಿಸುವಿರಿ. ರಾಜಕಾರಣಿಗಳು ಪಕ್ಷದ ವತಿಯಿಂದ ಸರ್ವವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳುವಿರಿ. ಸೈನಿಕರಿಗೆ ಮಡದಿ-ಮಕ್ಕಳ ಮೇಲೆ ಪ್ರೀತಿ ಹಂಬಲ ಕಾಡಲಿದೆ. ನೀವು ಶಸ್ತ್ರಚಿಕಿತ್ಸೆ ಮಾಡಿಕೊಂಡಾಗ ಅಥವಾ ಕಷ್ಟದಲ್ಲಿದ್ದಾಗ ನಿಮ್ಮ ಸಂಗಾತಿ/ ಹೆಂಡತಿ ಮಾಡಿದ ಸೇವೆಗಳಿಗೆ ನಿಮ್ಮಲ್ಲಿ ಕರುಣೆ ನೆನಪು ಇರಲಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

 

ತುಲಾ ರಾಶಿ:
ಮಗಳ ಕುಟುಂಬದಲ್ಲಿ ಆತಂಕ ಸೃಷ್ಟಿ. ಸುಳ್ಳು ಆಪಾದನೆ ಎದುರಿಸುವ ಪ್ರಸಂಗ ಬರಬಹುದು. ಕೆಲವೊಂದು ನಡೆಯುವ ಘಟನೆಗಳಿಗೆ ಅತಿಯಾದ ಚಿಂತನೆ ಮಾಡಿ ಆರೋಗ್ಯದಲ್ಲಿ ತೊಂದರೆ ಸಂಭವ. ನಿಮ್ಮ ಸಂಗಾತಿ ಬೆಲೆಯನ್ನು ಕೊಡದೆ ತಿರಸ್ಕರಿಸಬಹುದು. ನಿಮ್ಮ ಜೀವನದಲ್ಲಿ ಹಳೆಯ ಸವಿ ನೆನಪುಗಳು ಮರುಕಳಿಸಬಹುದು. ಸರ್ಕಾರಿ ಉದ್ಯೋಗ ವಿಳಂಬ ಸಾಧ್ಯತೆ. ಉದ್ಯೋಗಿಗಳಿಗೆ ಪ್ರಮೋಷನ್ ವಿಳಂಬ. ಬಾಕಿ ವೇತನ ಸಿಗುವ ಭಾಗ್ಯ. ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ವಿಚಾರ ಆತ್ಮೀಯರ ಮುಂದೆ ಪ್ರಸ್ತಾಪ ಮಾಡುವಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ವೃಶ್ಚಿಕ ರಾಶಿ:
ಈ ರಾಶಿಯವರಿಗೆ ವಿಶೇಷ ಸೂಚನೆ, ಸಮಯ ಉತ್ತಮ ಬಂದಿದೆ ,ಪ್ರಯತ್ನಗಳು ಸಫಲ ಕೊಳ್ಳಬಹುದು.ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿದ್ದು, 3ನೇ ಮನೆಯಲ್ಲಿ ಶನಿಯು ಗುರುವಿನಸಂಯೋಗದಲ್ಲಿ ಕುಳಿತಿದ್ದಾನೆ. ಮದುವೆ ಚರ್ಚಿಸಿ. ಹೊಸ ಉದ್ಯಮ ಪ್ರಾರಂಭ ಮಾಡಲು ಪ್ರಯತ್ನ ಮಾಡಿ. ಗೃಹ ಕಟ್ಟಡ ಪ್ರಾರಂಭಿಸಿ.ಉದ್ಯೋಗ ಬದಲಾವಣೆ ಬೇಡ.ವಿದೇಶದಲ್ಲಿರುವ ಉದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಭಾಗ್ಯ. ನಿಮ್ಮ ನಿರೀಕ್ಷೆಯನ್ನು ಮಿರಿ ಧನಸಂಪತ್ತು ಸಿಗುವ ಸಮಯ ಬಂದಿದೆ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಭೂವ್ಯವಹಾರದಲ್ಲಿ ಸಂತೃಪ್ತಿಯಾಗಿ ಚೇತರಿಕೆ. ಅಧ್ಯಾತ್ಮ ವಿಚಾರದಿಂದ ದೇವದರ್ಶನ ಭಾಗ್ಯ. ದಂಪತಿಗಳಿಗೆ ಸಂತಾನಭಾಗ್ಯ. ಎಲ್ಲಾ ನಮೂನೆಯ ವ್ಯಾಪಾರಸ್ಥರಿಗೆ ಧನಲಾಭ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಧನುಸ್ಸು ರಾಶಿ:
ಈ ರಾಶಿಗೆ ದ್ವಿತೀಯದಲ್ಲಿರುವ ಗುರು, ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಆಸೆ ಭಂಗ. ಕಠಿಣ ಶ್ರಮದಿಂದ ಜಯವು ಕಡೆಯಲ್ಲಿ ನಿಮ್ಮದೇ. ಸಂಗಾತಿ ಹೇಳಿದ ಮಾತುಗಳಿಂದ ಜಯ ತರಲಿದೆ. ಬೇಕ್ರಿ ,ಹೋಟೆಲ್, ದವಸ ಧಾನ್ಯ ವ್ಯಾಪಾರಸ್ಥರಿಗೆ ಚೇತರಿಕೆ ಹಿನ್ನಡೆ ಆದರೂ ದೃತಿಗೆಡದೆ ಮುಂದೆ ಸಾಗಿರಿ. ಸಂಗಾತಿ ನಿಮ್ಮ ಉಡುಗೊರೆದಿಂದ ಇಷ್ಟಾರ್ಥಗಳಿಸಿಕೊಳ್ಳಿ. ಆರೋಗ್ಯ, ಆಯಸ್ಸು ಚೆನ್ನಾಗಿದ್ದು ಮನಃಸಂಕಲ್ಪ ಈಡೇರುತ್ತದೆ. ಇನ್ನು 13 ತಿಂಗಳಲ್ಲಿ ಶನಿಯ ಸಂಚಾರ ಮುಂದೆ ಹೋಗಿ ನಿಮ್ಮ ಕೆಲಸಗಳಲ್ಲಿ ಜಯವನ್ನು ಕೊಟ್ಟೇ ಕೊಡುತ್ತಾನೆ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಮಕರ ರಾಶಿ:
ಈ ರಾಶಿಗೆ ಮಧ್ಯಮ ಫಲ.
ಲಾಭ ಮಿಶ್ರ ಫಲ ಸಿಗಲಿದೆ.
ಉತ್ತರಾಷಾಢ, ಶ್ರವಣ, ಧನಿಷ್ಠ ನಕ್ಷತ್ರದವರಿಗೆ ಮಕರ ರಾಶಿಯಾಗಿದ್ದು, ಗುರು-ಶನಿ ಸ್ವಕ್ಷೇತ್ರ ಶನಿಯು ಕೆಲಸಕಾರ್ಯಗಳಲ್ಲಿ ಅಡತಡೆ ಸಂಭವ. ಮದುವೆ ವಿಳಂಬ ಸಾಧ್ಯತೆ. ಆರೋಗ್ಯದಿಂದ ಮನಸ್ಸಿಗೆ ನೋವನ್ನು ಕೊಟ್ಟರೂ ಗುರುವು ಇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ದೈವಾನುಗ್ರಹ ಇದೆ ಕಷ್ಟದಿಂದ ಪಾರಾಗಿವಿರಿ. ಹಣವಿಲ್ಲದಿದ್ದರೂ ದೈವಕೃಪೆ ಇದೆ, ಆತ್ಮೀಯರ ಸಹಾಯದಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಹಿತೈಷಿಗಳ ಬಗ್ಗೆ ಎಚ್ಚರ ಇರಿ. ರಾಜಕಾರಣಿಗಳು ಉನ್ನತ ಪದವಿಗಾಗಿ ಪುನಹ ಪ್ರಯತ್ನ ಮಾಡಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಕುಂಭ ರಾಶಿ:
ಈ ರಾಶಿಗೆ 12ರ ಶನಿ ಒಳ್ಳೆಯ ಫಲಾಫಲಗಳನ್ನು ನೀಡುತ್ತಾನೆ. ನಿಮ್ಮ ಆರೋಗ್ಯ, ಮನಃಶಾಂತಿಗಾಗಿ ಈಶ್ವರ ಜಪ ಮಾಡಿರಿ. ಅತ್ತೆ ಮಾವನವರ ಆಶೀರ್ವಾದ ಪಡೆದುಕೊಳ್ಳಿ. ಅತ್ತೆ ಮಾವ ನವರಿಂದ ಆಸ್ತಿ ಸಿಗಲಿದೆ. ಏಳೂವರೆ ಶನಿಕಾಟವು ಆರಂಭ ವಾಗಿದೆ, ಯಾರಿಗೂ ಹಣಕಾಸಿನ ವಿಚಾರದಲ್ಲಿ ಜಾಮೀನು ನೀಡಬೇಡಿ. ಪ್ರೇಮಿಗಳ ಮದುವೆ ವಿಳಂಬ ಸಾಧ್ಯತೆ. “ಶರಣ್ ಎಂದವನಿಗೆ ಮರಣ ಇಲ್ವಂತೆ” ಎಂಬ ನಾಣ್ನುಡಿಯಂತೆ ಒಂದೇ ಮನೋಭಾವನೆಯಿಂದ ನಡೆದುಕೊಳ್ಳಿ ಇದಕ್ಕಿಂತ ಒಳ್ಳೆಯ ಮಾರ್ಗವೇ ಇಲ್ಲ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಮೀನ ರಾಶಿ:
ಪ್ರೇಮಿಗಳ ಮದುವೆ ಗೊಂದಲ ನಿವಾರಣೆಯಾಗಲಿದೆ.
ಏಕಾದಶ ಸ್ಥಾನದಲ್ಲಿ ಗುರು-ಶನಿ ಇದ್ದು, ಉದ್ಯೋಗಕ್ಕಾಗಿ ,ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಭಾಗ್ಯ ಸಿಗಲಿದೆ. ಕೃಷಿಕರಿಗೆ ಕೃಷಿ ಪ್ರಶಸ್ತಿ ಸಿಗಲಿವೆ. ಸಕ್ರಿಯವಾಗಿ ರಾಜತಾಂತ್ರಿಕ ಪ್ರವೇಶ ಪಡೆಯಲಿದ್ದೀರಿ. ಗುರುವಿನ ಕೃಪೆಯಿಂದ ಮದುವೆ ಭಾಗ್ಯ .ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ನಿಮ್ಮ ಸಂಕಲ್ಪಗಳು ಈಡೇರುವ ಕಾಲ. ಪ್ರಾಮಾಣಿಕ ಪ್ರಯತ್ನ ನಿಮ್ಮ ಕೈಹಿಡಿಯಲಿದೆ. ನಿಮಗೆ ವ್ಯಾಪಾರದಲ್ಲಿ ಚೇತರಿಕೆ. ಉಮಾಮಹೇಶ್ವರ ದೇವರನ್ನು ಪ್ರಾರ್ಥನೆ ಸಲ್ಲಿಸಿ ಮದುವೆ ಕೂಡಿ ಬರುವುದು. ಸಾಲದ ತೊಂದರೆ ನಿವಾರಣೆಗೆ ಬ್ಯಾಂಕನಲ್ಲಿ ಸಾಲ ಪಡೆಯಿರಿ. ನಿಮಗೆ ದೈವಬಲವಿದೆ ಗೃಹ ಕಟ್ಟಡ ಪ್ರಾರಂಭಿಸಿ. ನಿಮ್ಮ ವಂಶದ ಹಿರಿಯರನ್ನು ಪೂಜಿಸಿ. ಸಹೋದರಿ ಕಂಡರೆ ಭಕ್ತಿಯಿರಲಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top