ಪ್ರಮುಖ ಸುದ್ದಿ
ಗುರುವಾರ ರಾಶಿ ಭವಿಷ್ಯ-ಜುಲೈ-14,2022
- ಈ ರಾಶಿಯ ಗಂಡ ಹೆಂಡತಿ ಸದ್ಯದಲ್ಲಿಯೇ ಪುನರ್ಮಿಲನ!
- ಈ ರಾಶಿಯವರ ನಿಮ್ಮ ಸ್ವತ್ತು ಯೋಗ್ಯ ಬೆಲೆಗೆ ಮಾರಾಟ!
- ಗುರುವಾರ ರಾಶಿ ಭವಿಷ್ಯ-ಜುಲೈ-14,2022
- ಸೂರ್ಯೋದಯ: 05:50 ಏ ಎಂ, ಸೂರ್ಯಸ್ತ: 06:54 ಪಿ ಎಂ
-
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078,
ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಉತ್ತರಾಯಣ - ತಿಥಿ: ಪಾಡ್ಯ 08:16 ಪಿ ಎಂವರೆಗೂ, ನಂತರ ಬಿದಿಗೆ
ನಕ್ಷತ್ರ: ಉತ್ತರ ಆಷಾಢ 08:18 ಪಿ ಎಂ ವರೆಗೂ , ಶ್ರವಣ
ಯೋಗ: ವೈದೃತಿ 08:28 ಏ ಎಂ ವರೆಗೂ , ವಿಷ್ಕುಂಭ 04:17 ಏ ಎಂ ,
ಕರಣ: ಬಾಲವ 10:10 ಏ ಎಂ ವರೆಗೂ , ಕೌಲವ 08:16 ಪಿ ಎಂ ವರೆಗೂ , ತೈತಲೆ - ರಾಹು ಕಾಲ: 01:30 ನಿಂದ 03:00 ವರೆಗೂ
ಯಮಗಂಡ: 06:00 ನಿಂದ 07:30 ವರೆಗೂ
ಗುಳಿಕ ಕಾಲ: 09:30 ನಿಂದ 10:30 ವರೆಗೂ - ಅಮೃತಕಾಲ: 02:42 ಪಿ ಎಂನಿಂದ 04:06 ಪಿ ಎಂ ವರೆಗೂ
ಅಭಿಜಿತ್ ಮುಹುರ್ತ: 11:56 ಏ ಎಂ ನಿಂದ 12:48 ಪಿ ಎಂ ವರೆಗೂ
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ
ಪ್ರೇಮ ಸಂಭಾಷಣೆ ಮುಂದುವರೆಯಲಿದೆ, ಸ್ಥಿರಾಸ್ತಿ ಮಾರಾಟ ಅಥವಾ ಖರೀದಿ ಸಂಭವ, ವಿದೇಶ ಪ್ರಯಾಣ ಅವಕಾಶ ಸಿಗಲಿದೆ, ಉದ್ಯೋಗಿಗಳ ತೊಂದರೆಗಳು ನಿವಾರಣೆ, ದುಡಿಮೆ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಲಾಭ, ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ, ನೂತನ ರಾಜಕೀಯ ಸದಸ್ಯರು ಗೌರವಧನ ಪಡೆಯಲಿದ್ದಾರೆ, ಭವಿಷ್ಯಕ್ಕಾಗಿ ಉಳಿತಾಯದ ಕಡೆ ಗಮನಹರಿಸಿ, ಹೆಂಡತಿಯ ಮಾರ್ಗದರ್ಶನದಲ್ಲಿ ಮುಂದುವರೆಯಿರಿ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಕೆಲಸದಲ್ಲಿ ಅಭದ್ರತೆ ಸಂಭವವಿದೆ, ಬಹುದಿನದ ಸಾಲ ತೀರಿಸಲು ಇದ್ದೀರಿ, ಕೃಷಿ ಭೂಮಿ ಖರೀದಿಸುವಿರಿ, ಪ್ರಭಾವಿ ಅಧಿಕಾರಿ ರಾಜಕಾರಣಿ ಮನಸ್ಸು ಗೆಲ್ಲುವಿರಿ, ಹೊಸ ವಾಹನ ಖರೀದಿಸುವ ಸಾಧ್ಯತೆ, ಪುತ್ರ ಸಂತಾನ ಪ್ರಾಪ್ತಿ,
ವೃಷಭ ರಾಶಿ
ಶಿಕ್ಷಕವೃಂದದವರಿಗೆ ಸ್ಥಾನಚ್ಯುತಿ ಯಾಗುವ ಸಾಧ್ಯತೆ ಇದೆ, ಸಾಲದ ಬಾಧೆಯಿಂದ ಚಿಂತಾಕ್ರಾಂತ ಆಗಿದ್ದೀರಿ, ಕುಟುಂಬ ಸದಸ್ಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು, ಆದಾಯಕ್ಕಿಂತ ಅನಗತ್ಯವಾದ ಹೂಡಿಕೆಗಳು ಸಂಕಷ್ಟ ತಂದುಕೊಡಲಿದೆ ಎಚ್ಚರವಹಿಸಿ, ಕೆಲವರಿಗೆ ಮನೋವ್ಯಾಧಿ ಕಾಡಲಿದೆ, ಕುಟುಂಬಸ್ಥರ ಸಹಕಾರವನ್ನು ಕೇಳಿ ಹೊಸ ಉದ್ಯಮ ಪ್ರಾರಂಭ ಮಾಡಿದರೆ ಒಳಿತು, ನಿಮ್ಮ ಸಂಗಾತಿ ತುಂಬಾ ಪ್ರೀತಿಸುವಳು, ಹಿತೈಷಿಗಳಿಂದ ಈ ವಾರಾಂತ್ಯದಲ್ಲಿ ನಿಮಗೆ ಏನನ್ನಾದರೂ ಮಾಡಬಹುದು, ಕೋಪ ನಿಯಂತ್ರಣದಲ್ಲಿರಲಿ, ಉದ್ಯೋಗಿಗಳು ಶಾಂತವಾಗಿ ಕೆಲಸ ಮಾಡಿರಿ, ವ್ಯಾಪಾರಸ್ಥರು ಗ್ರಾಹಕರೊಡನೆ ಸಂಯಮದಿಂದ ವರ್ತಿಸಿ, ಕನಸಿನ ಚಿಂತೆಗಳನ್ನು ಬಿಟ್ಟು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಸಂಗಾತಿಗಾಗಿ ಸಂಜೆ ಕಾಯುವಿರಿ, ಸ್ನೇಹಿತರೊಂದಿಗೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಕೆಲವರು ಮನರಂಜನೆ ಮತ್ತು ಜೂಜಾಟ ನಿಂದಾಗಿ ಹಣ ಕಳೆದುಕೊಳ್ಳುವ ಸಾಧ್ಯತೆ, ಮೇಲಾಧಿಕಾರಿಯೂ ಹೊಸ ಭರವಸೆ ಹಾಗೂ ಸಹಾಯ ನೀಡುತ್ತಾರೆ,
ಮಿಥುನ ರಾಶಿ
ಹಿತೈಷಿಗಳಿಂದ ನಿಮ್ಮ ಗುರಿ ಮುಟ್ಟಿಸಲು ಅತಂತ್ರ ಮಾಡುವರು, ಊರಿನ ಜನತೆ ಸಮಾಜ ಸೇವಕರಿಂದ ಗ್ರಾಮಾಭಿವೃದ್ಧಿಗಾಗಿ ನಿರೀಕ್ಷಣೆ ಮಾಡುವರು, ಮೇಲಾಧಿಕಾರಿಯಾದ ನೀವು ಉದ್ಯೋಗಿಗಳ ತಪ್ಪುಗಳನ್ನು ಹುಡುಕಬೇಡಿ, ನಿಮ್ಮ ಮೇಲಿಟ್ಟಿರುವ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ, ಅನುಭವ ಹೊಂದಿರುವ ಅಧಿಕಾರಿಯಿಂದ ಸೂಕ್ತ ಮಾರ್ಗದರ್ಶನ ಪಡೆಯುವುದು ಉತ್ತಮ, ತಿಳಿಯದೆ ಸಹಿ ಮಾಡಬೇಡಿ, ಪ್ರೇಮಿಗಳಿಗೆ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಮಯ ಸಿಗುವುದು, ಪ್ರಭಾವಿ ರಾಜಕಾರಣಿ ಮತ್ತು ಅಧಿಕಾರಿಗಳ ಒತ್ತಡ ನಿಮ್ಮ ಮೇಲೆ ಬೀಳಲಿದೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವ, ಕಿರಾಣಿ, ಸಿದ್ಧ ಉಡುಪು, ಹಾರ್ಡ್ವೇರ್ ಸ್ಟೇಷನರಿ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗಲಿದೆ, ಸಂಜೆಯೊಳಗೆ ಶುಭಸುದ್ದಿ ಕೇಳುವಿರಿ, ಮಧ್ಯವರ್ತಿಗಳಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ, ಜಂಟಿ ವ್ಯಾಪಾರ ವಹಿವಾಟದಲ್ಲಿ ಅನುಮಾನ, ದುಂದುವೆಚ್ಚ ಮನಸ್ಥಿತಿ ತೆಗೆದುಹಾಕಿ, ಜಾಣ್ಮೆಯ ಮಾತುಗಳಿಂದ ಸಂಗಾತಿಯ ಹಿರಿಯರ ಮನಸ್ಸು ಗೆಲ್ಲುವಿರಿ,
ಕರ್ಕಾಟಕ ರಾಶಿ
ಕಾಮಕ್ರೋಧ ಮನಸ್ಥಿತಿ ಹತೋಟಿಯಲ್ಲಿರಲಿ, ಸಂಗಾತಿಯ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ, ಅದ್ಭುತ ಆಲೋಚನೆಗಳು ಮಾಡುವಿರಿ, ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳಲಿದೆ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಹಿರಿಯರಿಂದ ಆಸ್ತಿ ಸಿಗಲಿದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಹೆಚ್ಚಾಗಿ ಅವರೇ ನಾಶವಾಗಿ ಹೋಗುತ್ತಾರೆ, ಕಳೆದುಹೋಗಿರುವ ದುಡ್ಡು ಆಸ್ತಿ ನೆನೆಯುತ್ತ ಕೊರಗದಿರಿ, ಚೈತನ್ಯ ಬೆಳೆಸಿಕೊಳ್ಳಿ, ದೇವರ ಅನುಗ್ರಹ ಇದೆ, ಸ್ತ್ರೀಯರಿಗೆ ಉದ್ಯೋಗದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು, ರಾಜಕಾರಣಿಗಳಿಗೆ ದೊಡ್ಡಮಟ್ಟದ ಜವಾಬ್ದಾರಿಗಳು ನೀಡುವ ಸಾಧ್ಯತೆ, ಹೊಸಮನೆ ಕಟ್ಟಡ ಪ್ರಾರಂಭ, ಹಳೆಯ ಪಾವತಿ ವಸೂಲಿ ಸಾಧ್ಯತೆ, ನಿಶಕ್ತರಾಗಿರುವ ಯೋಜನೆಗಳು ಸದೃಡಗೊಳಿಸುವ ಪ್ರಯತ್ನ ಮಾಡುವಿರಿ, ಕೆಲವರು ಆರ್ಥಿಕದಲ್ಲಿ ಹಿನ್ನಡೆ ಆಗಲು ಅವರ ಸರಿಯಾದ ಪೂರ್ವ ಸಿದ್ಧತೆ ಇಲ್ಲದೆ ಕಾರಣ, ದುಃಖ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ,
ಸಿಂಹ ರಾಶಿ
ಮನಸ್ತಾಪದ ಸಂಬಂಧಿಗಳು ಹತ್ತಿರವಾಗಲಿವೆ. ನಿಮ್ಮ ಮತ್ತು ಸಂಗಾತಿಯ ವೈಯಕ್ತಿಕ ವ್ಯವಹಾರಿಕ ಮತ್ತು ಪ್ರಣಯ ಸಂಬಂಧಗಳು ಒಳಗೊಂಡಿದೆ. ಹಣಕಾಸು ಸ್ಥಿತಿ ಉತ್ತಮವಾಗಿದೆ, ಆದರೆ ಖರ್ಚುವೆಚ್ಚ ನಿಮ್ಮ ಹಿಡಿತದಲ್ಲಿರಲಿ. ವೃತ್ತಿಜೀವನದ ಒತ್ತಡವಿದ್ದರೂ ನೆಮ್ಮದಿ ತರಲಿದೆ. ಸಹೋದ್ಯೋಗಿಗಳ ಸಹಕಾರ ಕಚೇರಿ ಹಾಗೂ ವಾತಾವರಣ ಹಿತಕರವಾಗಿದೆ. ಯುವಕರು ನಿಮ್ಮ ಯಶಸ್ವಿಗಾಗಿ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಕೌಶಲ್ಯಗಳನ್ನು ಪಡೆದುಕೊಳ್ಳುವುದು ಉತ್ತಮ. ಕೆಲಸದ ಸ್ಥಳದಲ್ಲಿ ಸಂಮಹನ ಮುಖ್ಯವಾಗುತ್ತದೆ. ವರ್ಗಾವಣೆ ಪ್ರಯತ್ನಿಸಿದರೆ ಒಳಿತು. ನಿಮ್ಮ ದೌರ್ಜನ್ಯ ಯಾವುದು ಸರಿ ಯಾವುದು ತಪ್ಪು ಎನ್ನುವುದು ನಿಮ್ಮ ಅರಿವಿಗೆ ಬರಲಿದೆ. ಉನ್ನತ ವಿದ್ಯಾಭ್ಯಾಸ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಎಲ್ಲಾ ತರಹದ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ರಾಜಕಾರಣಿಗಳಿಗೆ ರಾಜಕೀಯ ಕ್ಷೇತ್ರದಲ್ಲಿ ರಾಜಮನ್ನಣೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ನಿಮ್ಮ ಹಳೆಯ ಸಾಲ ಮರುಪಾವತಿ. ರಿಯಲ್ ಎಸ್ಟೇಟ್ ನವರಿಗೆ ಲಾಭ. ಮಾರಾಟ ಮತ್ತು ಖರೀದಿ ಇಚ್ಛೆಯುಳ್ಳವರಿಗೆ ಸೂಕ್ತ ಸಮಯ. ಸಂಗಾತಿಯ ಚಂಚಲ ಮನಸ್ಸು ನಿಮ್ಮ ಅನಾರೋಗ್ಯ ಕಾಡುವುದು.
ಕನ್ಯಾ ರಾಶಿ
ನಿಮ್ಮ ರಾಶಿಗೆಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ. ಹೂಡಿಕೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ, ವ್ಯವಹಾರಗಳನ್ನು ನೋಡಿ ಸಹ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ. ಬಂದು ವರ್ಗಗಳೊಡನೆ ವಿಶ್ವಾಸವನ್ನು ಕಾಯ್ದುಕೊಳ್ಳಿ.ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳು ಹಾಗೂ ಸಹವರ್ತಿಗಳಿಂದ ಪ್ರಶಂಸೆ ದೊರೆಯಲಿದೆ. ನಿಮ್ಮ ಅಭಿಪ್ರಾಯಗಳನ್ನು ಕಡೆಗಣನೆ ಮಾಡುವರು ಆದಷ್ಟು ಕೆಲಸದ ಬಗ್ಗೆ ಮಾತ್ರ ಚಿಂತನೆ ನಡೆಸಿ. ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಉತ್ತಮ ಆಹಾರ ಸೇವನೆಯು ಒಳಿತು.ಆರ್ಥಿಕತೆ ಉತ್ತಮವಾಗಿ ಇರಲಿದೆ, ಆದರೆ ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ಸರಿಯಲ್ಲ. ನಿಮ್ಮ ಆಕರ್ಷಕ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಾರ್ಯದಲ್ಲಿ ದುಮುಕುವ ಸಾಧ್ಯತೆ ಇದೆ. ಆದಾಯದ ಪ್ರಮಾಣ ಹೆಚ್ಚಾಗಲಿದೆ. ಸಂಗಾತಿಯ ಮನ ಸಂತೋಷಪಡಿಸುವ ಕಾರ್ಯವನ್ನು ಮಾಡುವುದು ಉತ್ತಮ.
ತುಲಾ ರಾಶಿ
ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ. ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ. ನಿಮ್ಮ ಸಂಗಾತಿಯ ಪ್ರೀತಿಯ ಜೀವನದಲ್ಲಿ ಪ್ರಣಯದ ಸರಸ ಸಲ್ಲಾಪಗಳು ಹೆಚ್ಚಾಗುತ್ತದೆ. ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ. ದಂಪತಿಗಳಿಗೆ ಹಣದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ.
ವೃಶ್ಚಿಕ ರಾಶಿ: ಹಳೆಯ ಯೋಜನೆಗಳು ಮರುಚಾಲನೆ, ಹಿರಿಯರ ಮಾರ್ಗದರ್ಶನ ಅತ್ಯುತ್ತಮ, ಹೊಸ ಉದ್ಯಮ ಪ್ರಾರಂಭ ಮಾಡುವ ಮುನ್ನ ತರಬೇತಿ ಪಡೆಯುವುದು ಉತ್ತಮ, ಹೊಸ ಉದ್ಯಮ ಪ್ರಾರಂಭ ಮಾಡಲು ಧನಸಹಾಯ, ರಾಜಕಾರಣಿಗಳು ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು, ಋಣಾತ್ಮಕ ಚಿಂತನೆ ತ್ಯಜಿಸಿ, ಸಮಾಜಸೇವಕರಿಗೆ ನಿಮ್ಮ ಕ್ಷೇತ್ರದಲ್ಲಿ ವಿರೋಧಿಗಳ ಗುಂಪು ನಿಮ್ಮ ಮುಂದೆ ನಿಲ್ಲಬಹುದು, ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮಾತ್ರ ಅವರ ಮನಸ್ಸು ಪರಿವರ್ತಿಸಬಹುದು, ನಿಮಗೆ ಅತ್ತೆ ಕಡೆಯಿಂದ ಸ್ವಲ್ಪ ಮನಸ್ತಾಪ ಬರಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ ಸಂಭವ, ಕಟ್ಟಡ ಹಣದ ಕೊರತೆಯಿಂದಾಗಿ ನಿಲ್ಲುವ ಸಂಭವ, ವಿದೇಶಿ ನೆಲದ ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಅತಂತ್ರ ,ಕೆಲವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲವರಿಗೆ ಹಣಕಾಸಿನ ತುಂಬಾ ಕಷ್ಟ,
ಧನಸ್ಸು ರಾಶಿ
ಹಿತೈಷಿಗಳಿಂದ ಅಪಮಾನವಾಗುವ ಸಾಧ್ಯತೆ, ಸಂಜೆಯೊಳಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ, ಹೊಸ ಯೋಜನೆ ಪ್ರಾರಂಭದಿಂದ ಮನಸ್ಸು ಖುಷಿ, ಆರ್ಥಿಕತೆ ಚೇತರಿಕೆ, ಬಹುದಿನದ ಸಾಲ ಮತ್ತು ಕಷ್ಟ ದೂರವಾಗಲಿದೆ, ಮಕ್ಕಳಿಗೆ ಸರಕಾರದ ಉದ್ಯೋಗ ಕುಟುಂಬದಲ್ಲಿ ಸಂತೋಷದ ವಾತಾವರಣ ಪ್ರಾಪ್ತಿಯಾಗಲಿದೆ, ಮುನಿಸಿಕೊಂಡಿರುವ ಪತ್ನಿಯ ಮರಳಿ ನಿಮ್ಮ ಮನೆಗೆ ಬರುವ ಸಾಧ್ಯತೆ, ನಂತರ ನಿಮ್ಮ ಕಷ್ಟನಷ್ಟಗಳಿಗೆ ಭಾಗಿಯಾಗಿ ನಿಮ್ಮನ್ನು ಹಾರೈಕೆ ಮಾಡಲಿದ್ದಾರೆ, ಮದುವೆ ಚರ್ಚೆ ಮಾಡಲಿದ್ದೀರಿ, ಮನೆ ಕಟ್ಟಲು ಧನ ಸಹಾಯ ಸಿಗಲಿದೆ, ಕಳೆದುಹೋಗಿರುವ ಅಮೂಲ್ಯವಾದ ವಸ್ತು ಮರಳಿ ಸಿಗುವ ಭಾಗ್ಯ, ಕೆಲವರ ಕುಟುಂಬ ಸದಸ್ಯರು ತಪ್ಪಿಸಿಕೊಳ್ಳುವ ಸಾಧ್ಯತೆ, ಕೆಲಸದ ಒತ್ತಡ ಹೆಚ್ಚಾಗಿ ಎದೆ ನೋವು, ಕೆಲವರಿಗೆ ಅತಿಯಾದ ಮೂಲವ್ಯಾದಿ ನೋವು ಕಾಣಿಸುವುದು, ಬಂಧು ಬಳಗದಲ್ಲಿ ನೀವು ವರ್ಚಸ್ಸನ್ನು ಕಾಯ್ದುಕೊಳ್ಳಿ, ಸಂಗಾತಿಯೊಡನೆ ಮನೋಕಾಮನೆಗಳು ಪೂರೈಸಿಕೊಳ್ಳಲು ಸಂಜೆವರೆಗೂ ಕಾಯುವಿರಿ, ಸಾಲಗಾರರಿಂದ ಕಿರಿಕಿರಿ ಸಂಭವ, ಲೇವಾದೇವಿದಾರರ ಆರ್ಥಿಕ ಸ್ಥಿತಿ ಚೇತರಿಕೆ,
ಮಕರ ರಾಶಿ
ಮಹಿಳೆಯರು ಕಠಿಣ ಸವಾಲು ಎದುರಿಸುವಿರಿ, ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ, ತುಂಬಾ ಕಷ್ಟದಲ್ಲಿ ಇದ್ದವರು ಚೇತರಿಕೆ ಕಾಣುವರು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ರಾಜಕಾರಣಿಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಹೆಚ್ಚಿನ ನಿರೀಕ್ಷೆ ಸಫಲತೆ ಪಡೆಯುವಿರಿ, ಕೋರ್ಟು ವ್ಯವಹಾರಗಳಲ್ಲಿ ನಿಮ್ಮಂತೆ ನಿರ್ಣಯ, ಕುಟುಂಬದ ಪದೇಪದೇ ಕಲಹಗಳಿಂದ ಮಾನಸಿಕ ಅಶಾಂತಿ ಹೆಚ್ಚುತ್ತಿದೆ, ಮಾಡುತ್ತಿರುವ ಕಾರ್ಯಗಳಲ್ಲಿ ಮೇಲಧಿಕಾರಿಯಿಂದ ಅಡಚಣೆ ಸಂಭವ, ಆಕಸ್ಮಿಕ ಧನ ಪ್ರಾಪ್ತಿ ಯೋಗವಿದೆ, ಸರಕಾರಿ ಉದ್ಯೋಗ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಭಾಗ್ಯ, ಹಿತೈಷಿಗಳಿಂದ ಸದಾ ನಿಮ್ಮ ಬಗ್ಗೆ ನಿಂದನೆ, ಕೊನೆಯಲ್ಲಿ ಜಯ ನಿಮಗೆ ಸಿಗುತ್ತದೆ, ಮನೆ ಕಟ್ಟಡ ಅತಂತ್ರ ಸಂಭವ, ಮದುವೆ ಚಿಂತನೆ ಕಾಡಲಿದೆ, ಸಾಲದ ಹೊರೆಯಿಂದ ಚಿಂತಾಕ್ರಾಂತ, ಗಂಡು ಸಂತಾನಕ್ಕಾಗಿ ಪ್ರಾರ್ಥನೆ, ಗರ್ಭಿಣಿಯರು ಜಾಗ್ರತೆವಹಿಸಿ, ಹೆಣ್ಣುಮಕ್ಕಳಿಗೆ ಉದರ ದೋಷ ಸಂಭವ, ನೇತ್ರ ದೋಷ ಸಮಸ್ಯೆ,
ಕುಂಭ ರಾಶಿ
ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.
ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತಧನದ ಆಸೆ,ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ, ಮೇಲಧಿಕಾರಿಗಳಿಂದ ಕಾರ್ಯಜಯ, ಧನ ರತ್ನ ಆಭರಣ ಕಳವುಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ
ಮೀನ ರಾಶಿ
ನಿಮ್ಮ ಹಾಗೂ ಸಂಗಾತಿಯ ನಡುವೆ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ. ಮನೆಯ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳಿವೆ. ಬೆಲೆಬಾಳುವ ಆಭರಣ ಖರೀದಿಸುವಿರಿ. ವಿವಾಹಿತ ಜನರು ಸಂತಾನ ಅಪೇಕ್ಷಿಸುವರು. ಕಚೇರಿಯಲ್ಲಿ ಮೇಲಾಧಿಕಾರಿ ಒತ್ತಡ. ಕುಟುಂಬದಲ್ಲಿ ಮಧ್ಯಸ್ತಿಕೆಯ ಜನರಿಂದ ಅಪಶ್ರುತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿ ಯಶಸ್ಸು ತರಲಿದೆ. ಹಣ ಹೂಡಿಕೆ ಮಾಡಲು ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿ. ನೀವು ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆದುಕೊಳ್ಳಿ. ವೈರಿಗಳು ನಿಮ್ಮ ಪ್ರಗತಿಗೆ ಅಡ್ಡ ಪಡಿಸುತ್ತಾರೆ. ಪ್ರೇಮ ಜೀವನ ಮದುವೆ ಪ್ರಸ್ತಾಪ ಜೀವನ ಪೂರ್ಣ ಬಂಧದಲ್ಲಿ ಬದಲಾಗಬಹುದು. ಮನರಂಜನೆಗಾಗಿ ನಿಮ್ಮ ಕುಟುಂಬದ ಜೊತೆ ಸಾಗಿರಿ. ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಮಾಡಿ. ಇಂದಿನಿಂದ ಹಣ ಸಂಗ್ರಹಿಸುವುದು ಉತ್ತಮ. ಆಕಸ್ಮಿಕ ಮೂರನೇ ವ್ಯಕ್ತಿಯ ಅಕ್ಷೇಪ ನಿಮ್ಮ ಕುಟುಂಬದಲ್ಲಿ ಬಿರುಕು ಸಂಭವ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com