- ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ರತ್ನ ಧಾರಣೆ ಮಾಡಿಕೊಳ್ಳಲೂ ಯಾವ ರಾಶಿಯವರು ಯಾವ ರತ್ನವನ್ನು ಧರಿಸಬೇಕು ಎಂಬ ಬಗ್ಗೆ ಮಾಹಿತಿ.
ಮೇಷ ಮತ್ತು ವೃಶ್ಚಿಕ ರಾಶಿಯವರು ನೀವಾದರೆ 6 ಕ್ಯಾರೆಟ್ ತೂಕದ ಹವಳವನ್ನು ಧರಿಸಬೇಕು. ಉಂಗುರವನ್ನು ಬಂಗಾರದಲ್ಲಿ ಮಾಡಿಸಿಕೊಂಡರೆ ಒಳ್ಳೆಯದು. ಹವಳದ ಉಂಗುರವನ್ನು ಉಂಗುರದ ಬೆರಳಿಗೇ ಧರಿಸಬೇಕು. ಮಂಗಳವಾರದಂದು ಕುಜ ಗ್ರಹದ ಪ್ರಾರ್ಥನೆ ಮಾಡುತ್ತಾ ಧಾರಣೆ ಮಾಡಿದರೆ ಉತ್ತಮ ಫಲಗಳು ಉಂಟಾಗುತ್ತವೆ. ಧಾರಣಾ ಸಮಯ ಬೆಳಿಗ್ಗೆ .
ವೃಷಭ ಮತ್ತು ತುಲಾ ರಾಶಿಯವರು 10 ರಿಂದ 60 ಸೇಂಟ್ಸ್ ತೂಕದ ವಜ್ರವನ್ನು ಬೆಳ್ಳಿಯ ಉಂಗುರದಲ್ಲಿ ಅಳವಡಿಸಿ ಧಾರಣೆ ಮಾಡಿಕೊಳ್ಳಬೇಕು. ಉಂಗುರವನ್ನು ಅನಾಮಿಕ ಬೆರಳಿನಲ್ಲಿ ಶುಕ್ರವಾರದಂದು ಬೆಳಿಗ್ಗೆ ಧರಿಸಿರಿ. ಶುಕ್ರಗ್ರಹ ಮಂತ್ರವನ್ನು ಹೇಳಿಕೊಳ್ಳುತ್ತಾ ಧಾರಣೆ ಮಾಡುವುದರಿಂದ ಸುಖ, ಶಾಂತಿ, ಯಶಸ್ಸು, ಕೀರ್ತಿ ನಿಮ್ಮದಾಗುವುದು.
ಮಿಥುನ ಮತ್ತು ಕನ್ಯಾ ರಾಶಿಯವರು 4 ಕ್ಯಾರೆಟ್ ತೂಕದ ಪಚ್ಚೆಯನ್ನು ಬಂಗಾರ ಧಾತುವಿನಲ್ಲಿ ಅಳವಡಿಸಿ ಧಾರಣೆ ಮಾಡಬೇಕು. ಬುಧವಾರ ಬೆಳಿಗ್ಗೆ ಧರಿಸಿರಿ. ಕನಿಷ್ಠ ಬೆರಳಿನಲ್ಲಿ ಪಚ್ಚೆ ಧರಿಸುವುದರಿಂದ ಆರೋಗ್ಯಭಾಗ್ಯ, ಸ್ಮರಣಶಕ್ತಿ ಹೆಚ್ಚಳ ಮತ್ತಿತರ ಶುಭಫಲಗಳನ್ನು ಕಾಣಬಹುದು.
ಕಟಕ ರಾಶಿ
3 ಕ್ಯಾರೆಟ್ ತೂಕದ ಮುತ್ತನ್ನು ಬೆಳ್ಳಿ ಧಾತುವಿನ ಉಂಗುರದಲ್ಲಿ ಅಳವಡಿಸಿ ಧರಿಸಬೇಕು. ಅನಾಮಿಕ (ಉಂಗುರದ ಬೆರಳು) ಧರಿಸುವುದರಿಂದ ವ್ಯಾಪಾರ ಹಾಗೂ ಉದ್ಯೋಗದಲ್ಲಿ ಲಾಭ ಉಂಟಾಗುತ್ತದೆ.
ಸಿಂಹ ರಾಶಿ
3 ಕ್ಯಾರೆಟ್ ತೂಕದ ಮಾಣಿಕ್ಯವನ್ನು ಬಂಗಾರಧಾತುವಿನ ಉಂಗುರದಲ್ಲಿ ಅಳವಡಿಸಿ ಅನಾಮಿಕ ಬೆರಳಿಗೆ ಭಾನುವಾರದಂದು ಧಾರಣೆ ಮಾಡಬೇಕು. ಮಾಣಿಕ್ಯ ಧಾರಣೆಯಿಂದ ಆಯಸ್ಸು ವೃದ್ಧಿಯಾಗುತ್ತದೆ, ಹೃದಯ ಹಾಗೂ ನೇತ್ರ ಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತವೆ.
ಧನು,ಮೀನ ರಾಶಿ
6 ಕ್ಯಾರೆಟ್ ತೂಕದ ಪುಷ್ಯರಾಗವನ್ನು ತರ್ಜನಿ (ತೋರುಬೆರಳು) ಬೆರಳಿಗೆ ಗುರುವಾರ ಸಂಜೆ ಧರಿಸಬೇಕು. ಉಂಗುರು ಬಂಗಾರ ಅಥವಾ ಬೆಳ್ಳಿಯದ್ದಾದರೆ ಒಳ್ಳೆಯದು. ಪುಷ್ಯರಾಗವನ್ನು ಧರಿಸುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ವೃದ್ಧಿಯಾಗುತ್ತದೆ.
ಮಕರ, ಕುಂಭರಾಶಿ
3 ರಿಂದ 4 ಕ್ಯಾರೆಟ್ ತೂಕದ ನೀಲ ರತ್ನವನ್ನು ಬಂಗಾರ ಅಥವಾ ಪಂಚಲೋಹದ ಉಂಗುರದಲ್ಲಿ ಅಳವಡಿಸಿ ಮಧ್ಯದ ಬೆರಳಿಗೆ ಧರಿಸಬೇಕು. ಶನಿವಾರದಂದು ಸಂಜೆ ನೀಲ ರತ್ನ ಧಾರಣೆ ಮಾಡುವುದರಿಂದ ಮನೋಕ್ಲೇಷಗಳು ದೂರವಾಗುತ್ತವೆ.



