Connect with us

Dvgsuddi Kannada | online news portal | Kannada news online

ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು…

ಜ್ಯೋತಿಷ್ಯ

ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು…

  • ಪ್ರತಿಯೊಬ್ಬರೂ ಹಣಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆ. ತಮ್ಮ ಜಾತಕವನ್ನು ತೋರಿಸಿದಾಗಲೂ ಹಣದ ಬಗ್ಗೆ ಕೇಳುತ್ತಾರೆ. ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ ನೋಡಿ.
  • ಹಣ ಯಾರಿಗೆ ಬೇಡ. ಪ್ರತಿಯೊಬ್ಬರೂ ಹಣಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆ. ತಮ್ಮ ಜಾತಕವನ್ನು ತೋರಿಸಿದಾಗಲೂ ಹಣದ ಬಗ್ಗೆ ಕೇಳುತ್ತಾರೆ. ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.
  • ಮೇಷ ಲಗ್ನ: ಸಿಂಹರಾಶಿಯಲ್ಲಿ ರವಿ, ಕುಂಭ ರಾಶಿಯಲ್ಲಿ ಗುರು ಚಂದ್ರರಿದ್ದರೆ ಧನವಂತನಾಗುವನು ಅಥವಾ ಜನ್ಮ ಲಗ್ನವಾದ ಮೇಷದಲ್ಲಿ ಕುಜ ಶುಕ್ರನಿಂದ ಕೂಡಿದ್ದರೆ ಧನವಂತನಾಗುವನು.
  • ವೃಷಭ ಲಗ್ನ: ಶುಕ್ರನುಬುಧ-ಶನಿಗಳಿಂದ ಕೂಡಿದ್ದರೆ ಧನವಂತನಾಗುವನು ಅಥವಾ ಲಗ್ನವನ್ನು ನೋಡಿದರೂ ಧನವಂತನಾಗುವನು.
  • ಮಿಥುನ ಲಗ್ನ: ಬುಧನು ಶನಿ-ಶುಕ್ರನಿಂದ ಕೂಡಿದ್ದರೆ ಬಹು ಧನವಂತನಾಗುವನು ಅಥವಾ ಈ ಲಗ್ನವನ್ನು ಬುಧ-ಶನಿ-ಶುಕ್ರರು ನೋಡಿದರೂ ಬಹು ಧನವಂತನಾಗುವನು.
  • ಕಟಕ ಲಗ್ನ: ಗುರು-ಕುಜರು ಇದ್ದು ಚಂದ್ರನಿಂದ ನೋಡಿದರೂ ಅಥವಾ ಈ ಲಗ್ನವನ್ನು ಕುಜ, ಗುರು, ಚಂದ್ರರು ನೋಡಿದರೂ ಬಹು ಧನವಂತನಾಗುವನು.
  • ಸಿಂಹ ಲಗ್ನ: ಧನಸ್ಸಿನಲ್ಲಿ ಗುರುವು ಮಿಥುನದಲ್ಲಿ ಚಂದ್ರರಿದ್ದರೆ ಧನವಂತನಾಗುವನು. ಅಲ್ಲದೆ ಲಗ್ನದಲ್ಲಿ ಸೂರ್ಯನು, ಕುಜನು ಬೃಹಸ್ಪತಿಗಳು ಕೂಡಿದ್ದರೂ, ನೋಡಿದರೂ ಧನವಂತನಾಗುವನು.
  • ಕನ್ಯಾ ಲಗ್ನ: ಮಕರದಲ್ಲಿ ಶನಿ, ಕರ್ಕಾಟಕದಲ್ಲಿ ಕುಜನಿದ್ದರೆ ಬಹು ಧನವಂತನಾಗುವನು. ಈ ಲಗ್ನಕ್ಕೆ ಶನಿ-ಕುಜರ ದೃಷ್ಟಿ ಇದ್ದರೂ ಧನವಂತನಾಗುವನು.
  • ತುಲಾ ಲಗ್ನ: ಲಗ್ನದಲ್ಲಿ ಶುಕ್ರನಿದ್ದು ಶನಿ-ಬುಧರಿಂದ ಕೂಡಿದ್ದರೆ ಅಥವಾ ಶನಿ-ಬುಧರಿಂದ ನೋಡಿದರೆ ಧನವಂತನಾಗುವನು.
  • ವೃಶ್ಚಿಕ ಲಗ್ನ: ಕುಜನಿದ್ದು ಚಂದ್ರ, ಶುಕ್ರ, ಶನಿ ಈ ಮೂರು ಗ್ರಹಗಳಿಂದ ಕೂಡಿದ್ದರೂ ಅಥವಾ ನೋಡಿದರೂ ಬಹು ಧನವಂತನಾಗುವನು.
  • ಧನಸ್ಸು ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಅಥವಾ ನೋಡಿದರೂ ಜಾತಕದವನು ಧನವಂತನಾಗುವನು.
  • ಮಕರ ಲಗ್ನ: ಶನಿಯಿದ್ದು ಶುಕ್ರನಿಂದ ಕೂಡಿದ್ದರೂ ಅಥವಾ ನೋಡಿದರೂ ಧನವಂತನಾಗುವನು.
  • ಕುಂಭ ಲಗ್ನ: ಶನಿಯು ಬುಧರಿಂದ ಕೂಡಿದ್ದರೂ ಧನವಂತನಾಗುವನು.
  • ಮೀನ ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಧನವಂತನಾಗುತ್ತಾನೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top