ಗೋಕರ್ಣ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಕಾಂಗ್ರೆಸ್ ಸೇರಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಹಾಗೂ ರೈತರು ನಡೆಸಿದ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದರು. ಈ ಹೋರಾಟದಿಂದ ಕೇವಲ 3 ದಿನಗಳಲ್ಲಿ ರಾಜ್ಯಕ್ಕೆ 157-158 ಕೋಟಿ ನಷ್ಟ ಮಾಡಿದ್ದಾರೆ. ರಾಜ್ಯದ ಜನತೆ ಹಾಗೂ ಪ್ರಯಾಣಿಕರು ತತ್ತರಿಸಿ ಹೋಗುವಂತೆ ಮಾಡಿದ್ದಾರೆ.ಇನ್ನು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದರೆ ಕಾಂಗ್ರೆಸ್ ಪಕ್ಷ ಸೇರಲಿ ಎಂದು ಹೇಳಿದರು.