ಡಿವಿಜಿ ಸುದ್ದಿ, ದಾವಣಗೆರೆ: ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಪರಿಸರ ಸ್ನೇಹಿ ವಿಷಮುಕ್ತ ಭತ್ತ ವಿಷಯ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಧುನಿಕ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯುವ ತವಕದಲ್ಲಿ ಶಿಫಾರಸ್ಸಿಗಿಂತ ಹೆಚ್ಚು ರಸಗೊಬ್ಬರ & ಕೀಟನಾಶಕಗಳ ಅವೈಜ್ಞಾನಿಕ ಬಳಕೆಯಿಂದಾಗಿ, ಕೃಷಿಗೆ ಮಾಡುವ ವೆಚ್ಚವು ಅಧಿಕವಾಗಿ ಪಡೆಯುವ ಲಾಭಾಂಶ ಕಡಿಮೆಯಾಗಿದೆ, ಆಹಾರವು ವಿಷಯುಕ್ತವಾಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಅನುಸರಿಸುತ್ತಿರುವ ಆಧುನಿಕ ಕೃಷಿಯಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು, ರಸಾಯನಿಕಗಳನ್ನು ಬಳಸದೇ ಖರ್ಚನ್ನು ಮಿತಗೊಳಿಸಿ, ಪರಿಸರ ಸ್ನೇಹಿಯಾಗಿ ವಿಷಯುಕ್ತ ಆಹಾರ ಪಡೆಯಲು ಮುಖ್ಯ.
ಪ್ರಮುಖ ಆಹಾರ ಬೆಳೆಯಾದ ಭತ್ತದಲ್ಲಿ “ಪರಿಸರ ಸ್ನೇಹಿ ವಿಷಮುಕ್ತ ಭತ್ತ” ಎನ್ನುವ ವಿಷಯದ ಬಗ್ಗೆ ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನುರಿತ ಹಾಗೂ ಅನುಭವಿ ವಿಜ್ಞಾನಿಗಳು, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಯುಕ್ತ ಆಸಕ್ತಿಯುಳ್ಳ ರೈತ ಬಾಂಧವರು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿಯ ಕಛೇರಿಯಲ್ಲಿ ತಮ್ಮ ಹೆಸರನ್ನು ಅ.15 ರೊಳಗೆ ನೋಂದಾಯಿಸಿಕೊಳ್ಳುವುದು ಅಥವಾ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ಇವರ ದೂರವಾಣಿ ಸಂಖ್ಯೆ: 8277931242 ಅಥವಾ 827792864 ರಲ್ಲಿ ನೋಂದಾಯಿಸಿಕೊಳ್ಳಲು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.



