ಬೆಂಗಳೂರು: ನಮ್ಮಲ್ಲಿ ಯಾರಿಗೂ ಭಾಷಾಭಿಮಾನವಿಲ್ಲ ಎಂದು ಸ್ಯಾಂಡಲ್ ವುಡ್ ನಟ ದರ್ಶನ್ ಹೇಳಿದ್ದಾರೆ. ಟಾಲಿವುಡ್ ನಲ್ಲಿ ತಮ್ಮ ನಿರೀಕ್ಷಿತ ರಾಬರ್ಟ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡದಕ್ಕೆ ಗರಂ ಆಗಿರುವ ದರ್ಶನ್, ಈ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್‌ಗೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿ ಮಾತನಾಡಿದರು. ಟಾಲಿವುಡ್ ವಿರುದ್ಧ ನಟ ದರ್ಶನ್ ಗರಂ; ಫಿಲ್ಮ್ ಚೇಂಬರ್ ಗೆ ದೂರು

ನಮಲ್ಲಿ ಯಾರಿಗೂ ಭಾಷಾಭಿಮಾನ ಇಲ್ಲ. ಇದನ್ನು ನೇರವಾಗಿ ಹೇಳ್ತೀನಿ, ನಾವು ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿಯ ಭಾಷೆಯನ್ನೇ ನಾವು ಮಾತನಾಡುತ್ತೇವೆ. ಹೊರತು ನಾವು ಕನ್ನಡವನ್ನು ಮಾತನಾಡುವುದಿಲ್ಲ ಎಂದು ಕಿಡಿಕಾರಿದರು. ಹೀಗೆ ಮುಂದುವರಿದರೆ ನಮಗೆ ಹೊಡೆತ ಬೀಳುತ್ತದೆ. ಒಟ್ಟಿನಲ್ಲಿ ಪರ ಭಾಷೆ ಸಿನಿಮಾಗಳು ನಮ್ಮಲ್ಲಿನ ಸಿನಿಮಾಗಳು ಬಿಡುಗಡೆಯಾಗುವ ವೇಳೆಯಲ್ಲಿ ಬಿಡುಗಡೆಯಾದ್ರು, ಯತಾವುದೇ ಸಮಸ್ಯೆಯಾಗುವುದಿಲ್ಲ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅವರ ಸಿನಿಮಾಗಳು ಬಿಡುಗಡೆಯಾಗು ವೇಳೆಯಲ್ಲಿ ನಮ್ಮ ಸಿನಿಮಾಗಳು ಬಿಡುಗಡೆಯಾಗುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಸಂಸತ್ ಅಧಿವೇಶನ ಬಹಿಷ್ಕರಿಸಿದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ



