ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ‘ರಾಬರ್ಟ್’ ರಿಲೀಸ್ಗೆ ಚಿತ್ರತಂಡ ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಕ್ಯಾತೆ ತೆಗೆದ ಟಾಲಿವುಡ್ ವಿರುದ್ಧ ಗರಂ ಆಗಿರುವ ನಟ ದರ್ಶನ್, ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.
ಮಾರ್ಚ್ 11ರಂದು ರಾಬರ್ಟ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದಾರೆ. ಆ ದಿನ ಆಂಧ್ರದಲ್ಲಿ ರಾಬರ್ಟ್ ರಿಲೀಸ್ಗೆ ಅಡ್ಡಿ ಬಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆಯುತ್ತಿದ್ದು, ನಟ ದರ್ಶನ್, ರಾಬರ್ಟ್ ಸಿನಿಮಾ ನಿರ್ದೇಶಕ ಉಮಾಪತಿ ಪಾಲ್ಗೊಂಡಿದ್ದಾರೆ. ರಾಬರ್ಟ್ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲದೇ ತೆಲುಗಿನ ‘ಶ್ರೀಕಾರನ್’, ‘ಗಾಲಿ ಸಂಪತ್’ ಹಾಗೂ ‘ಜಾಥಿ ರತ್ನಲು’ ಚಿತ್ರಗಳು ಬಿಡುಗಡೆ ಆಗ್ತಿವೆ.
ತೆಲುಗು ಚಿತ್ರಗಳಿಗೆ ತೊಂದರೆ ಆಗದಿರಲಿ ಎಂದು ರಾಬರ್ಟ್ ದಿನಾಂಕವನ್ನು ಮುಂದೂಡಿ ಎಂದು ರಾಬರ್ಟ್ ನಿರ್ಮಾಪಕರಿಗೆ ಆಂಧ್ರದ ಸಿನಿಮಾ ವಿತರಕರು ಸಲಹೆ ಕೊಟ್ಟಿದ್ದಾರೆ. ರಾಬರ್ಟ್ ಕರ್ನಾಟಕದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತದೆ. ಆಂಧ್ರದಲ್ಲೂ ತೆಲುಗು ಚಿತ್ರಗಳಿಗೆ ಸಮಸ್ಯೆ ಆಗುತ್ತೆ. ಹಾಗಾಗಿ ರಾಬರ್ಟ್ ದಿನಾಂಕವನ್ನು ಒಂದು ವಾರ ಮುಂದೂಡಿ ಎಂಬ ಆಂಧ್ರದ ವಿತರಕರ ಸಲಹೆಗೆ ನಿರ್ಮಾಪಕ ಉಮಾಪತಿ ಗರಂ ಆಗಿದ್ದಾರೆ. ಈ ಕುರಿತು ಟಾಲಿವುಡ್ ವಿರುದ್ಧ ನಟ ದರ್ಶನ್ ಫಿಲಂ ಚೇಂಬರ್ಗೆ ದೂರು ನೀಡಿದ್ದಾರೆ. ಸದ್ಯ ಫಿಲಂ ಚೇಂಬರ್ ಸದಸ್ಯರ ಸಭೆ ನಡೆಯುತ್ತಿದ್ದು, ಕಚೇರಿ ಹೊರಗೆ ಟಾಲಿವುಡ್ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.



