ದಾವಣಗೆರೆ: ರಾಜ್ಯದಲ್ಲಿ 1ರಿಂದ 5ನೇ ತರಗತಿ ಆರಂಭಿಸವುದು ಮತ್ತು ಕೋವಿಡ್ ನಿಯಮ ಇನ್ನಷ್ಟು ಸರಳೀಕರಣಗೊಳಿಸುವ ಕುರಿತು ಇನ್ನೆರೆಡು ದಿನಗಳಲ್ಲಿ ತಜ್ಞರ ಸಭೆ ಕರೆದು ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ನೀಡುವ ಸಲಹೆ ಆಧರಿಸಿ ಸರ್ವ ಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು. ಇದೇ ವೇಳೆ ಗಡಿ ಜಿಲ್ಲೆಗಳಲ್ಲಿ ಸಂಚಾರ ಪುನರಾರಂಭಿಸುವ ಕುರಿತು ಸಹ ತೀರ್ಮಾನ ಮಾಡಲಾಗುವುದು. ನವೆಂಬರ್ ವರೆಗೆ ಮಾತ್ರ ಸಿಎಂ ಅಧಿಕಾರದಲ್ಲಿ ಇರುತ್ತಾರೆ ಎಂದು ಸಿಎಂ ಇಬ್ರಾಹಿಂ, ಹೇಳಿಕೆ ಕುರಿತು ಮಾತನಡಿ, ಅವರಿಗೆ ಯಾವಾಗ ಏನು ತಿಳಿಯುತ್ತೋ ಹಾಗೆ ಮಾತಾಡುತ್ತಾರೆ. ಅವರ ಜತೆ ನಾನೇ ಮಾತನಾಡುತ್ತೇನೆ ಎಂದರು.



