ದಾವಣಗೆರೆ: ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಜೂನ್ 26 ರಿಂದ ಜುಲೈ3ರ ವರೆಗೆ ಬಿಡಾಡಿ ಹಂದಿ ಮಾಲೀಕರ ಸಮೀಕ್ಷೆ ನಡೆಸಲಾಗುವುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಬಿಡಾಡಿಹಂದಿಗಳ ಮಾಲೀಕರು ಪಾಲಿಕೆಯ ಆರೋಗ್ಯ ಇಲಾಖೆ ಕಚೇರಿಗೆ ತಮ್ಮಭಾವಚಿತ್ರ, ಆಧಾರ್, ಪಾನ್ ಇತ್ಯಾದಿ ಗುರುತಿನ ಚೀಟಿ ಮತ್ತುಪ್ರಮಾಣ ಪತ್ರದೊಂದಿಗೆ ಆಗಮಿಸಿ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಜಾತಿ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.



