ನೋವಿಲ್ಲದಂತೆ ಒಂದೇ ನಿಮಿಷದಲ್ಲಿ ಸಾಯಲು ಆತ್ಮಹತ್ಯಾ ಪಾಡ್ ಬಳಕೆಗೆ ಸ್ವಿಡ್ಜರ್ ಲೆಂಡ್ ಸರ್ಕಾರ ಶಾಸನಾತ್ಮಕ ಅನುಮತಿ ನೀಡಿದೆ.
ಸೂಸೈಡ್ ಪಾಡ್ ಗಳೆಂದು ಕರೆಯಲಾಗುವ ‘ಸ್ಯಾಕ್ರೋ’ ಯಂತ್ರಗಳು 3ಡಿ ಮುದ್ರಿತ್ ಕ್ಯಾಪ್ಸೂಲ್‌ಗಳಾಗಿದ್ದು, ತಮ್ಮೊಳಗೆ ನೈಟ್ರೋಜನ್ ತುಂಬಿಕೊಂಡು ಆಮ್ಲಜನಕದ ಪ್ರಮಾಣದ ತಗ್ಗಿಸಿ ಒಳಗಿರುವ ವ್ಯಕ್ತಿ ನೋವಿಲ್ಲದೆ ಜೀವ ಬಿಡಲು ನೆರವಾಗುತ್ತದೆ.
ಈ ಯಂತ್ರವನ್ನು 2022ರಿಂದ ಬಳಕೆಗೆ ಸ್ವಿಡ್ಜರ್ ಲೆಂಡ್ ಸರ್ಕಾರ ಸಿದ್ಧಪಡಿಸಲಾಗುತ್ತಿದೆ. ಈ ಯಂತ್ರವನ್ನು ನೆದರ್ಲೆಂಡ್ಸ್‌ನಲ್ಲಿ ವೈದ್ಯ ಫಿಲಿಪ್ ನಿಟ್‌ಶ್ಕಿ ಅವರು ಅಭಿವೃದ್ಧಿಪಡಿಸಿದ್ದಾರೆ. ದ್ರವ ರೂಪದ ಸೋಡಿಯಂ ಪೆಂಟೋಬಾರ್ಬಿಟಲ್ ಅನ್ನು ಕರಗಿಸಿಕೊಳ್ಳುವ ಆತ್ಮಹತ್ಯಾ ಯಂತ್ರಗಳು ಯಾವುದೇ ನಿಯಂತ್ರಿತ ವಸ್ತುಗಳಿಲ್ಲದೆ ಶಾಂತಿಯಿಂದ ಸಾಯಲು ಅನುವು ಮಾಡಿಕೊಡುತ್ತವೆ.
ಒಮ್ಮೆ ಸಕ್ರಿಯವಾದ ಕೂಡಲೇ ಕ್ಯಾಪ್ಸೂಲ್ ಒಳಗೆ ನೈಟ್ರೋಜನ್ ನುಗ್ಗಿ ಆಮ್ಲಜನಕದ ಪ್ರಮಾಣವನ್ನು ವ್ಯಾಪಕವಾಗಿ ತಗ್ಗಿಸಿ, ಒಳಗಿರುವ ವ್ಯಕ್ತಿ ಪ್ರಜ್ಞಾಹೀನನಾಗಿ ಹಾಗೇ ಯಾವುದೇ ನೋವಿಲ್ಲದೇ ಸಾಯುತ್ತಾನೆ. ಇಡೀ ಪ್ರಕ್ರಿಯೆಯು ಒಂದು ನಿಮಿಷದಲ್ಲಿ ನಡೆದು ಹೋಗುತ್ತದೆ ಎಂದು ಫಿಲಿಪ್ ತಿಳಿಸಿದ್ದಾರೆ.